ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಶ್ವಿನಿ ನಕ್ಷತ್ರ’ ನಟಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಶ್ವಿನಿ ನಕ್ಷತ್ರ’ ನಟಿ

ಬೆಂಗಳೂರು : ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿ ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ. ಶುಕ್ರವಾರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದು, ನಂತರ ಹಿರಿತೆರೆಯಲ್ಲೂ ಖ್ಯಾತಿ ಗಳಿಸಿದ ನಟಿ ಮಯೂರಿ ಬಾಳಬಂಧನಕ್ಕೆ ಒಳಗಾಗಿದ್ದಾರೆ. ಬಹುಕಾಲದ ಗೆಳೆಯ ಅರುಣ್ ಜೊತೆ ಅವರು ಸಪ್ತಪದಿ ತುಳಿದಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ. ವಿವಾಹದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಹೌದು, ನಾನು ಮದುವೆ ಆಗಿದ್ದೇನೆ. ನಮ್ಮ 10 ವರ್ಷದ ಗೆಳೆತನಕ್ಕೆ ಇಂದು ಅರ್ಥ ಸಿಕ್ಕಿದೆ. ಸದ್ಯದಲ್ಲೇ ನಾವು ಹೆಚ್ಚಿನ ವಿಚಾರ ಹಂಚಿಕೊಳ್ಳುತ್ತೇವೆ’ ಎಂದು ಪೋಸ್ಟ್ ಮಾಡಿದ್ದಾರೆ

Related