ಅಶ್ವಿನ್ ಬದಲು, ಜಡೇಜಾಗೆ ಚಾನ್ಸ್?

ಅಶ್ವಿನ್ ಬದಲು, ಜಡೇಜಾಗೆ ಚಾನ್ಸ್?

ವೆಲ್ಲಿಂಗ್ಟನ್, ಫೆ. 26 : ಭಾರತ, ಆತಿಥೇಯ ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದೇ ರೀತಿಯ ಹೋರಾಟ ಕಂಡುಬಂದರೂ, ಪಂದ್ಯದಲ್ಲಿ ಭಾರತಕ್ಕೆ ಮೊದಲ ಇನಿಂಗ್ಸ್ ನಲ್ಲಿ ಕಿವೀಸ್ನ ಕೆಳಕ್ರಮಾಂಕದ ಆಟಗಾರರು ಮಾಡಿದ ಉಪಯುಕ್ತ ಬ್ಯಾಟಿಂಗ್. ಆದರೆ, ಈ ಬ್ಯಾಟಿಂಗ್ ಭಾರತ ತಂಡಕ್ಕೆ ಎರಡೂ ಇನಿಂಗ್ಸ್ನಲ್ಲಿ ಸಿಗಲಿಲ್ಲ. ಚರ್ಚ್ನಲ್ಲಿ ಆರಂಭವಾಗಲಿರುವ 2ನೇ ಪಂದ್ಯಕ್ಕೆ ಬ್ಯಾಟಿಂಗ್ನಲ್ಲಿ ವಿಫಲವಾಗಿರುವ ಆರ್.ಅಶ್ವಿನ್ರ ಬದಲು ಎಡಗೈ ಆಫ್ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಆರ್. ಅಶ್ವಿನ್ ಮೊದಲ ಇನಿಂಗ್ಸ್ನಲ್ಲಿ ಟಿಮ್ ಸೌಥಿಯಿಂದ ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗಿದ್ದರೆ, 2ನೇ ಇನಿಂಗ್ಸ್ನಲ್ಲೂ 11 ಎಸೆತ ಎದುರಿಸಿ 4 ರನ್ ಬಾರಿಸಿ ಸೌಥಿಗೆ ವಿಕೆಟ್ ನೀಡಿದ್ದರು.

Related