ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ

ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ

ಮುದ್ದೇಬಿಹಾಳ: ತಮ್ಮ ಕುಟುಂಬಗಳ ಸುರಕ್ಷತೆಯನ್ನು ಬದಿಗಿಟ್ಟು ಕೋವಿಡ್-19 ವಿರುದ್ದ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸದ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘಟನೆ ತಾಲ್ಲೂಕಾಧ್ಯಕ್ಷೆ ಸುಮಂಗಲಾ ಪಡಸಾಲಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತಹಶೀಲ್ದಾರ್‍ರಿಗೆ ಮನವರಿಕೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಆಶಾ ಕಾರ್ಯಕರ್ತೆಯರ ಗೋಳಾಟಕ್ಕೆ ಯಾವುದೇ ಸ್ಪಂದನೆ ನೀಡದಿರುವುದು ಖಂಡನೀಯ. ನಾವು ನಮ್ಮ ಕುಟುಂಬ ತೊರೆದು ಕೆಲಸ ಮಾಡುತ್ತಿದ್ದರೂ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.

ದಮಯಂತಿ ಕುಲಕರ್ಣಿ ಮಾತನಾಡಿ, 12 ವರ್ಷಗಳಿಂದ ವೇತನ ಹೆಚ್ಚಿಸುತ್ತಿಲ್ಲ. ಧರಣಿ ಮಾಡಿದಾಗೊಮ್ಮೆ 500 ರೂ.ಹೆಚ್ಚಿಸುತ್ತಿದ್ದಾರೆ. ಕೊರೊನಾ ಎಂದು ಹಗಲು ರಾತ್ರಿ ದುಡಿದರೂ ಕೇವಲ 4 ಸಾವಿರ ರೂ. ಹೇಗೆ ಜೀವನ ನಡೆಸಬೇಕು. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಧರಣಿ ನಿಲ್ಲಿಸುವುದಿಲ್ಲ. ಬೇರೆ ಆಶಾಗಳನ್ನು ನೇಮಕ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಊರಿನೊಳಗೆ ಬೇರೆ ಆಶಾಗಳು ಬಂದರೆ ಹೋರಾಟ ಮಾಡುತ್ತೇವೆ ಎಂದು ಕಿಡಿ ಕಾರಿದರು.

ತಹಶೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಮುನಾ ಚಲವಾದಿ, ಸರಸ್ವತಿ ಚಟ್ನಳ್ಳಿ, ಲಕ್ಷ್ಮೀಬಾಯಿ ಬಿರಾದಾರ, ಮಲ್ಲಮ್ಮ ಹರಿಜನ, ಮಮ್ತಾಜ ದರಬಾರ, ಜುಬೇದಾಗಬೇಗಂ ಮನಿಯಾರ, ಶಾಂತಮ್ಮ ಭೈರೋಡಗಿ, ಈರಮ್ಮ ಆಲೂರ, ನಿಂಗಮ್ಮ ಬಿರಾದಾರ, ಮುದಕಮ್ಮ ಬಿರಾದಾರ ಮೊದಲಾದವರು ಇದ್ದರು.

Related