ಮಲೇಷ್ಯಾ ನೂತನ ಪ್ರಧಾನಿಯಾಗಿ ಮುಹಿದ್ದೀನ್

ಮಲೇಷ್ಯಾ ನೂತನ ಪ್ರಧಾನಿಯಾಗಿ ಮುಹಿದ್ದೀನ್

ಕ್ವಾಲಲಂಪೂರ್,ಮಾ.1 : ಮಲೇಷ್ಯಾದ ನೂತನ ಪ್ರಧಾನಮಂತ್ರಿಯಾಗಿ ಮಾಜಿ ಒಳಾಡಳಿತ ಸಚಿವ ಮುಹಿದ್ದೀನ್ ಯಾಸಿನ್ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಧಾನಿ ಕ್ವಾಲ ಲಂಪೂರ್ನ ನ್ಯಾಷನಲ್ ಪ್ಯಾಲೆಸ್ನಲ್ಲಿ ನಡೆದ ಸಮಾರಂಭದಲ್ಲಿ ಯಾಸಿನ್ ನೂತನ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಪಡೆದರು.
ಇವರು ಮಲಯ ಮುಸ್ಲಿಂ ಮೆಜಾರಿತಿ ನೇತೃತ್ವದ ಮಿತ್ರಕೂಟದ ನಾಯಕರಾಗಿದ್ದಾರೆ. ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಪತನಗೊಂಡು ಹಿರಿಯ ನಾಯಕ ಮಹತೀರ್ ಮಹಮದ್ ರಾಜೀನಾಮೆ ನೀಡಿದ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಿಂದೆ ಹಗರಣದಿಂದ ಭಾರೀ ವಿವಾದಕ್ಕೆ ಸಿಲುಕಿದ್ದ ಆಡಳಿತ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

Related