ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಸ್ಪೈಸ್ ಗಾರ್ಡನ್ನಲ್ಲಿ ಶ್ರೀ ಅಶ್ವಥ್ ನಾರಾಯಣ ರೆಡ್ಡಿ ರವರ ಜಯಂತಿಯ ಅಂಗವಾಗಿ ಅವರ ಪುತ್ಥಳಿಗೆ ಮಾಜಿ ಸಚಿವ ಅರವಿಂದ್ ಲಿಂಬಾವಳಿಯವರು ಮಾಲಾರ್ಪಣೆ ಮಾಡಿ, ಗೌರವ ನಮನಗಳನ್ನು ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಮಾಜಿ ರಾಜ್ಯ ಗೃಹ ಸಚಿವರಾಗಿ ಹಾಗೂ ವರ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿ ರಾಜ್ಯಕ್ಕೆ ಮತ್ತು ಮತಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು. ಇದನ್ನೂ ಓದಿ: ಮಣ್ಣಿನ ಗಣಪತಿ ವಿತರಿಸಿದ ಶಾಸಕ ಕೆ ಗೋಪಾಲಯ್ಯ!
ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಎನ್. ಆರ್. ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷರಾದ ಶ್ರೀ ಮನೋಹರ ರೆಡ್ಡಿ, ಹಿರಿಯ ಮುಖಂಡರಾದ ಶ್ರೀ ಬಿ. ಕೆ. ರಾಜಾರೆಡ್ಡಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
