ಟೆನ್ಷನ್ನಲ್ಲಿದ್ದೀರಾ? ಪುಟಾಣಿ ವಿಡಿಯೋ ನೋಡಿ

ಮಾ. 16 : ಮನೆಯ ಮೂಲೆಯಲ್ಲಿ ಕುಳಿತಿದ್ದ ತನ್ನ ಗೆಳೆಯನಿಗೆ ಪುಟಾಣಿ ಕಂದ ತನ್ನ ಸ್ಪರ್ಶ ಮಾತ್ರದಿಂದ ಸಮಾಧಾನ ಮಾಡಿದ್ದಾನೆ. ಮುದ್ದಿನ ಶ್ವಾನಗಳು ಎಲ್ಲರ ನೆಚ್ಚಿನ ಗೆಳೆಯರು. ನಿಷ್ಕಲ್ಮಷ, ನಿಸ್ವಾರ್ಥ ಪ್ರೀತಿ, ವಿಶ್ವಾಸಕ್ಕೂ ಶ್ವಾನಗಳು ಉದಾಹರಣೆ. ಆದರೆ, ಎಷ್ಟಾದರೂ ಇವುಗಳು ಪ್ರಾಣಿ. ಹೀಗಾಗಿ, ಒಮ್ಮೊಮ್ಮೆ ಈ ಶ್ವಾನಗಳೂ ತಾಳ್ಮೆಗೆಡುವುದಿದೆ. ಈ ಸಂದರ್ಭದಲ್ಲಿ ಇವುಗಳನ್ನ ಸಮಾಧಾನ ಮಾಡಲು ಪಳಗಿದವರೇ ಬೇಕು. ಅಂತ ಪಳಗಿದ ಹೀರೋ ಈ ಪುಟಾಣಿ.
ಸದ್ಯ ಕಂದ ಸಿಟ್ಟಿಗೆದ್ದ ಶ್ವಾನವನ್ನು ಸಮಾಧಾನ ಮಾಡುವ ಅದ್ಭುತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗಲೇ ಹೃದಯ ತುಂಬಿ ಬರುತ್ತದೆ.
ಡೈಪರ್ ತೊಟ್ಟು ಮನೆ ತುಂಬಾ ಕಿಲಕಿಲ ನಗು ಬೀರುತ್ತಾ ಓಡಾಡುತ್ತಿದ್ದ ಈ ಕಂದಮ್ಮನಿಗೆ ಅದೇನನಿಸಿತೋ ಏನೋ. ಸೀದಾ ಹೋಗಿ ಸಿಟ್ಟಿಗೆದ್ದಿದ್ದ ಶ್ವಾನದ ತಲೆ ಸವರಿ ಸಮಾಧಾನ ಮಾಡಿದ್ದ. ಕಂದನ ಸ್ಪರ್ಶದಿಂದ ಮುದ್ದಿನ ಶ್ವಾನವೂ ಶಾಂತವಾಗಿತ್ತು. ಮಗುವಿನೊಂದಿಗೆ ಶ್ವಾನವೂ ಮಗುವಾಗಿ ಹೋಗಿ ಬಿಟ್ಟಿತ್ತು…

Related