ಪರಿಶಿಷ್ಟ ಜಾತಿಯಿಂದ ಕೈಬಿಡಲು ಮನವಿ

ಪರಿಶಿಷ್ಟ ಜಾತಿಯಿಂದ ಕೈಬಿಡಲು ಮನವಿ

ಮಾಲೂರು : ಸುಪ್ರೀಂ ಕೋರ್ಟ್ ರಿಟ್ ಪಿಟಿಷನ್ ತೀರ್ಪಿನ ಆದೇಶದಂತೆ 4 ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಾ. ಪರಮೇಶ್ವರ ಯುವ ಸೈನ್ಯ, ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘ, ರಾಜ್ಯ ದಲಿತ ಪದವಿಧರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಂ. ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ಜಮಾಯಿಸಿದ ಪಧಾಧಿಕಾರಿಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬಂಜಾರ (ಲಂಬಾಣಿ, ಭೋವಿ, ಕೋರಮ, ಮತ್ತು ಕೊರಚ) ಜಾತಿಗಳನ್ನು ಕೈಬಿಡುವಂತೆ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ತಹಸೀಲ್ದಾರ್ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.

ಈಗಾಗಲೇ ಗೌರವಾನಿತ ಸುಪ್ರೀಂ ಕೋರ್ಟ್ ರಿಟ್ ಪಿಟಿಷನ್ ನಂ.1381/2019 ರ 14.2.2020 ರ ತೀರ್ಪಿನ ಆದೇಶದಂತೆ ರಾಷ್ಟಪತಿ ಪಟ್ಟಿಯಲ್ಲಿ ಈ 4 ಜಾತಿಗಳನ್ನು ಪರಿಶಿಷ್ಟ ಜಾತಿಗಳು ನಮೂದಾಗಿರುವುದಲ್ಲ ಆದ ಕಾರಣ ಸುಪೀಂ ಕೋಟ್ ಈ 4 ಜಾತಿಗಳನ್ನು ಕೈ ಬೀಡಬೇಕು ಎಂದು ಆದೇಶಿಸಿದ್ದು, ಅದರಂತೆ ಈ ಆದೇಶವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಪಾಲಿಸಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, , ಯುವತಿ, ಯುವಕರಿಗೆ ಉದ್ಯೋಗಾವಾಕಾಶ ಹಾಗೂ ಸಮುದಾಯಕ್ಕೆ ಸಿಗಬೇಕಾದ ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದು ಸ್ವಾಭಿಲಂಭಿಗಳಾಗಿ ಜೀವನ ಸಾಗಿಸಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Related