ಮಾವು ರುಚಿಯಾಗಿವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು

ಮಾವು ರುಚಿಯಾಗಿವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು

ಇತ್ತೀಚಿನ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕೆಂದರೆ ನಾವು ಬೇರೆ ಬೇರೆ ತರಹದ ಪ್ರಯತ್ನ ಮಾಡುತ್ತೇವೆ, ಆದರೆ ನಾವು ಬಳಸುವ ಪ್ರತಿನಿತ್ಯದ ಆಹಾರ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಅಡಗಿದೆ. ಅದನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕಾಗಿದೆ.

ಸಾಮಾನ್ಯವಾಗಿ ಜನರು ಮಾವಿನಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಆದರೆ ಇದು ಕಂಪ್ಲೀಟ್ ನಿಜವಲ್ಲ. ಮಾವಿನ ಹಣ್ಣನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ ತೂಕ ಹೆಚ್ಚಾಗುವುದಿಲ್ಲ.

ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಸದ್ಯ ಮಾರುಕಟ್ಟೆಗೆ ವಿವಿಧ ತಳಿಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದೆ. ಮಾವು ರುಚಿಯಾಗಿವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ತೂಕ ಇಳಿಸಿಕೊಳ್ಳಲು ಮಾವಿನ ಹಣ್ಣನ್ನು ಹೇಗೆ ಸೇವಿಸಬೇಕು:

ಮಾವಿನ ಹಣ್ಣನ್ನು ಮಿತವಾಗಿ ಸೇವಿಸಿ, ಮಾವಿನಹಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಮತ್ತು ನಾರಿನಂಶವಿದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಮಾವಿನ ಹಣ್ಣನ್ನು ತಿನ್ನಬಹುದು. ಆದರೆ ಸೀಮಿತ ಪ್ರಮಾಣದಲ್ಲಿ ಮಾವಿನಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿ. ಮಾವಿನ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಾವಿನ ಹಣ್ಣಿನ ಜ್ಯೂಸ್ ಅಥವಾ ಮ್ಯಾಂಗೋ ಶೇಕ್ ಮಾಡುವ ಬದಲು ಮಾವಿನಕಾಯಿಯನ್ನು ಕತ್ತರಿಸಿ ಹಾಗೆಯೇ ತಿನ್ನಿ. ಜ್ಯೂಸ್ ಮಾಡುವುದು ಅಥವಾ ಮ್ಯಾಂಗೋ ಶೇಕ್ ಮಾಡುವುದು ಮಾವಿನ ಹಣ್ಣಿನಲ್ಲಿರುವ ಎಲ್ಲಾ ನಾರನ್ನು ನಾಶಪಡಿಸುತ್ತದೆ.

Related