ಜನ ಸಾಮಾನ್ಯರಿಗೆ ಮತ್ತೊಂದು ಶಾಕ್

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್

ನವದೆಹಲಿ : ತೈಲ ಮಾರಾಟ ಕಂಪನಿಗಳು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮಹಾನಗರಗಳಲ್ಲಿ ದೇಶಿಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಏರಿಕೆ ಮಾಡಿವೆ. ಇದರೊಂದಿಗೆ ಸತತ 5ನೇ ದಿನ ತೈಲ ಬೆಲೆ ಏರಿಕೆಯಾಗಿದೆ.

ನ.24 ರಂದು ಬೆಳಗ್ಗೆ 6 ಗಂಟೆಯಿAದ ಜಾರಿಗೆ ಬರುವಂತೆ ಒಂದು ಲೀಟರ್ ಪೆಟ್ರೋಲ್ ಬೆಲೆ 8 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 18 ರಿಂದ 20 ಪೈಸೆಯವರೆಗೆ ಹೆಚ್ಚಳ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 6 ಪೈಸೆಯಷ್ಟು ಹೆಚ್ಚಾಗಿ 81.59 ರೂಪಾಯಿ ತಲುಪಿದೆ. ಡೀಸೆಲ್ ಬೆಲೆ 16 ಪೈಸೆ ಜಾಸ್ತಿಯಾಗಿ 71.41 ರೂ. ತಲುಪಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 88.29 ರೂ. ಡೀಸೆಲ್ ದರ 77.90 ರೂ. ತಲುಪಿದೆ. ದೈನಂದಿನ ದರ ಪರಿಷ್ಕರಣೆ ನಂತರದಲ್ಲಿ ಸಾಗಾಣೆಗೆ ಅನುಗುಣವಾಗಿ ಆಯಾ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ.

Related