ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೆಂಕಿ ಅವಘಡ

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೆಂಕಿ ಅವಘಡ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ, ಮತ್ತೆ ಬೆಂಕಿ ಅವಘಡ ಕಾಣಿಸಿಕೊಳ್ಳುತ್ತಿರುವುದರಿಂದ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನಗರದಲ್ಲಿ ಬೆಂಕಿ ಆಹುತಿಗಳು ನಡೆಯುತ್ತಿರುವುದರಿಂದ ದೊಡ್ಡ, ದೊಡ್ಡ ಕಟ್ಟಡಗಳೇ ಬೆಂಕಿಗೆ ಆಹುತಿ ಆಗುತ್ತಿವೆ.

ಇಂದು ಕೂಡ ನಗರದಲ್ಲಿ ಒಂದು ಬೆಂಕಿ ಅವಘಡ ಸಂಭವಿಸಿದ್ದು ಸುಮಾರು 30ಕ್ಕೂ ಲಕ್ಷದ ಅಧಿಕ ವೆಚ್ಚದ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ಬಳೆಪೇಟೆಯ ಪೇಂಟ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದೆ. ಘಟನೆಯಲ್ಲಿ ಕಟ್ಟಡದಲ್ಲಿದ್ದ ಎಲ್ಲಾ ಅಂಗಡಿಗಳು ಹೊತ್ತಿ ಉರಿದಿದೆ. ಬರೊಬ್ಬರಿ‌ 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಕಟ್ಟಡಕ್ಕೆ ಬೆಂಕಿ ತಗುಲಿರುವ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೇಯಿಂಟ್ ಅಂಗಡಿ ಮಾಲೀಕ ಕೃಷ್ಣಮೂರ್ತಿ, ಲಕ್ಷಾಂತರ ಮೌಲ್ಯದ ಸ್ಟಾಕ್ ಹೊತ್ತಿ ಉರಿಯೋದನ್ನು ಕಂಡು ಕಣ್ಣೀರು ಹಾಕಿದ್ದಾರೆ.

ಇದು 20 ವರ್ಷದ ಹಳೆಯ ಕಟ್ಟಡವಾಗಿದ್ದು, ಬೆಂಕಿ ತಗುಲಿದ್ದು ಹೇಗೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಕೆಳ ಮಹಡಿಯಲ್ಲಿ ಪೇಂಡಟ್ ಶಾಪ್ ಇತ್ತು. ಮೊದಲ ಮಹಡಿಯಲ್ಲಿ ಬ್ಯಾಗ್ ಮಳಿಗೆ ಇತ್ತು.

 

Related