ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ

ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ

ಶ್ರೀಹರಿಕೋಟಾ: ಇಸ್ರೋ ಸಂಸ್ಥೆಯ ಚಂದ್ರಯಾನ 3 ಯಶಸ್ವಿ ಕಂಡ ನಂತರ ಮತ್ತೆ ಇಸ್ರೋ ಸಂಸ್ಥೆಯು ಒಂದಾದ ಮೇಲೆ ಒಂದು ಸಾಧನೆ ಮಾಡುತ್ತಲೇ ಇದೆ. ಹೌದು, ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ ಹೊರ ಬಿದ್ದಿದ್ದು ಈ ಸಾಧನೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಂಶ ವ್ಯಕ್ತಪಡಿಸಿದ್ದಾರೆ.

ಇಸ್ರೋ ಕಳಿಸಿದ್ದ ಆದಿತ್ಯ ನೌಕೆ ಇದೀಗ ನಿಗದಿತ ಎಲ್‌-1 ಕಕ್ಷೆ ತಲುಪಿದೆ. ಸೋಲಾರ್ ಮಿಷನ್ ಅಡಿಯಲ್ಲಿ ISRO ಆದಿತ್ಯ ಎಂಬ ನೌಕೆಯನ್ನು ಕಳಿಸಿತ್ತು. ಇದೀಗ ಆದಿತ್ಯ-L1 ಇಂದು ತನ್ನ ಗಮ್ಯಸ್ಥಾನ L-1 ಪಾಯಿಂಟ್ ಅನ್ನು ತಲುಪಿದೆ. ಇಸ್ರೋ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ತನ್ನ ಅಂತಿಮ ಗಮ್ಯಸ್ಥಾನ ಕಕ್ಷೆಯ L-1 ಪಾಯಿಂಟ್‌ನಲ್ಲಿ ಸೂರ್ಯನನ್ನು ಅಧ್ಯಯನ ಮಾಡಲು ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ‘ಆದಿತ್ಯ L1’ ಬಾಹ್ಯಾಕಾಶ ನೌಕೆಯನ್ನು ಸ್ಥಾಪಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ.

ಶನಿವಾರ ಸಂಜೆ ಸುಮಾರು 4 ಗಂಟೆಗೆ ಆದಿತ್ಯ-ಎಲ್ 1 ಅನ್ನು ಎಲ್ 1 ಸುತ್ತ ‘ಹಾಲೋ’ ಕಕ್ಷೆಯಲ್ಲಿ ಇರಿಸಲಾಗುತ್ತದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಇದನ್ನು ಮಾಡದಿದ್ದರೆ, ಅದು ಬಹುಶಃ ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸುವ ಸಾಧ್ಯತೆಗಳಿವೆ ಎಂದೂ ಅವರು ತಿಳಿಸಿದ್ದಾರೆ.

ಇಸ್ರೋ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ಸಾಕ್ಷಾತ್ಕಾರದಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ನಾನು ಶ್ಲಾಘಿಸುತ್ತೇನೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.

Related