ರಾಜ್ಯದ ಘಟಾನುಘಟಿ ನಾಯಕರುಗಳಿಗೆ ಇಂದು ಅಗ್ನಿಪರೀಕ್ಷೆ

ರಾಜ್ಯದ ಘಟಾನುಘಟಿ ನಾಯಕರುಗಳಿಗೆ ಇಂದು ಅಗ್ನಿಪರೀಕ್ಷೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು,14ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಇನ್ನು ರಾಜ್ಯದಲ್ಲಿರುವ ಘಟಾನುಘಟಿಗಳ ಮಕ್ಕಳುಗಳನ್ನು ಈ ಬಾರಿ ಲೋಕಸಭಾ ಚುನಾವಣೆ ಕಣದಲ್ಲಿ ಇಳಿಸಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಘಟಾನುಘಟಿ ನಾಯಕರುಗಳು ತಮ್ಮ ಮಕ್ಕಳು ಸೇರಿದಂತೆ ತಮ್ಮ ತಮ್ಮ ಸಂಬಂಧಿಕರಿಗೆ ಟಿಕೆಟ್ ನೀಡಿ ಚುನಾವಣೆ ಕಣಕ್ಕೆ ಇಳಿಸಿದ್ದಾರೆ. ಹೌದು, ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಪಕ್ಷ ದಲ್ಲಿ ಘಟಾನುಘಟಿಗಳ ನಾಯಕರುಗಳಿಗೆ ಮಾಡು ಇಲ್ಲವೇ ಮಡಿ ಎಂಬ ಸಂದರ್ಭ ಈಗ ಒದಗಿ ಬಂದಿದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿಂದು 2ನೇ ಹಂತದ ಮತದಾನ

ಕಾಂಗ್ರೆಸ್ ಪಕ್ಷದಲ್ಲಿ ಕನಿಷ್ಠ 18ರಿಂದ 20 ಪಕ್ಷ ಗೆಲ್ಲುವ ಭರವಸೆಯನ್ನು ಹೊಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ, ಬಿಜೆಪಿ 28 ಕ್ಷೇತ್ರಕ್ಕೆ 28 ಕ್ಷೇತ್ರವನ್ನು ಗೆಲ್ಲುವ ಭರವಸೆಯನ್ನು ಹೊಂದಿದೆ. ಆದ್ದರಿಂದ ಇಂದು ನಡೆಯುತ್ತಿರುವ ಚುನಾವಣೆಗೆ ಘಟಾನುಘಟಿಗಳ ಸ್ವಂತ ಪರೀಕ್ಷೆ ಎದುರಾಗಿದೆ.

ಯೆಸ್..‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಣವೆಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳಿವೆ, ಹಾಗೂ ಮಾಜಿ ಸಿಎಂ ಹಾಗೂ ಲಿಂಗಾಯತ ಪ್ರಬಲ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ಇದು ಸವಾಲಿನ ಚುನಾವಣೆ ಎಂದೇ ಪರಿಗಣಿಸಲಾಗಿದೆ.

 

Related