ಐಪಿಸೆಟಿಗೊಂದು ಪ್ರತ್ಯೇಕ ಟ್ರಾನ್ಸಾಫಾರ್ಮರ್

ಐಪಿಸೆಟಿಗೊಂದು ಪ್ರತ್ಯೇಕ ಟ್ರಾನ್ಸಾಫಾರ್ಮರ್

ಹುಳಿಯಾರು : ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಂದು ಐಪಿ ಸೆಟ್‌ಗೆ, ಹತ್ತಿರವಿದ್ದರೆ ಎರಡು ಐಪಿ ಸೆಟ್‌ಗೊಂದರಂತೆ ಪ್ರತ್ಯೇಕ ಟ್ರಾನ್ಸಾಫಾರ್ಮರ್ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಗ್ರಾಮದಲ್ಲಿ ಭದ್ರಾ ನಾಲಾ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ತಾಲೂಕಿನ ಗಡಿಭಾಗವಾದ ಡಿಂಕನಹಳ್ಳಿಯಲ್ಲಿ 400 ಕೋಟಿ ರೂ. ವೆಚ್ಚದ 400 ಕೆವಿ ಸಾಮರ್ಧ್ಯದ ಸ್ವಿಚ್ ಗೇರ್ ಸ್ಟೇಷನ್ ಮಾಡಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿಯ ಭೂಮಿ ಪೂಜೆ ಮಾಡಲಾಗುವುದು ಎಂದರಲ್ಲದೆ ದೊಡ್ಡಎಣ್ಣೇಗೆರೆ, ಮತಿಘಟ್ಟ, ಜೆ.ಸಿ.ಪುರ, ಬೆಳಗುಲಿ, ದೊಡ್ಡಅಗ್ರಹಾರದಲ್ಲಿ ಬೆಸ್ಕಾಂ ಎಂವಿಎಸ್‌ಎಸ್ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೊಳವೆ ಬಾವಿ ಅಳೆಯುವ ಉಪಕರಣ

ಸರ್ಕಾರದ ಕೊಳವೆ ಬಾವಿ ಕೊರೆಯುವ ದಂದೆಗೆ ಕಡಿವಾಣ ಹಾಕುವ ಸಲುವಾಗಿ ಎಷ್ಟು ಅಡಿ ಆಳ ಕೊರೆದಿದೆ, ಎಷ್ಟು ಕೇಸಿಂಗ್ ಬಿಟ್ಟಿದ್ದಾರೆ, ಎಷ್ಟು ಅಡಿಯಲ್ಲಿ ನೀರು ಸಿಕ್ಕಿದೆ, ಎಷ್ಟು ಇಂಚು ನೀರು ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಉಪಕರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ಗೆ ಕೊಳವೆ ಬಾವಿ ಅಳೆಯುವ ಉಪಕರಣ ಸಿದ್ಧಪಡಿಸಲು ಮನವಿ ಸಹ ಮಾಡಲಾಗಿದೆ.

Related