ನೇಣು ಶರಣಾದ ಅರಣ್ಯ ಇಲಾಖೆಯ ನೌಕರ

ನೇಣು ಶರಣಾದ ಅರಣ್ಯ ಇಲಾಖೆಯ ನೌಕರ

ಗಂಗಾವತಿ : ಅರಣ್ಯ ಇಲಾಖೆಯಲ್ಲಿ ಕ್ಷೇಮನಿಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವAತೆ ಒತ್ತಾಯಿಸಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿಟ್ಟು ನಿವೃತ್ತಿ ಅಂಚಿನಲ್ಲಿದ್ದ ಅರಣ್ಯ ಇಲಾಖೆಯ ಅರೆಕಾಲಿಕ ನೌಕರನೊಬ್ಬ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಮೃತ ನೌಕರನನ್ನು ಟಿ. ಮಲ್ಲಿಕಾರ್ಜುನ (59) ಎಂದು ಗುರುತಿಸಲಾಗಿದೆ. ಕಳೆದ 37 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಅರೆಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ಇವರು ಇದೇ ವರ್ಷ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದರು.

ಇದುವರೆಗೂ ಅರಣ್ಯ ಇಲಾಖೆಯಲ್ಲಿ ಕ್ಷೇಮನಿಧಿ ಯೋಜನೆಯಲ್ಲಿ ನೇಮಕಗೊಂಡ ಸಾವಿರಾರು ನೌಕರರಿಗೆ ಖಾಯಂ ಮಾಡಿಲ್ಲ. ಕೆಲವರು ಇದೇ ವರ್ಷ ನಿವೃತ್ತಿಯಾಗಲಿದ್ದು ಮುಂದಿನ ಭವಿಷ್ಯ ಕಷ್ಟವಾಗಿದೆ. ಸರಕಾರ ಕೂಡಲೇ ಕ್ಷೇಮನಿಧಿ ಯೋಜನೆಯಲ್ಲಿ ನೇಮಕಗೊಂಡವರನ್ನು ಖಾಯಂ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದಾರೆ.

 

Related