ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ಅಮೂಲ್ಯಾ ಮುದ್ದಾದ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಹೆರಿಗೆಯ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಅಮೂಲ್ಯಾ ಇದೀಗ ಮಕ್ಕಳು ಹಾಗೂ ಕುಟುಂಬದವರ ಜೊತೆ ಅಣ್ಣಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದು, ಫೋಟೋಗಳು ವೈರಲ್ ಆಗುತ್ತಿದೆ.
ಚಲುವಿನ ಚಿತ್ತಾರದ ಮೂಲಕ ಕನ್ನಡಗಿರ ಮನೆ ಮನದಲ್ಲಿ ಐಶು ಆಗಿ ಪ್ರಸಿದ್ದರಾಗಿರುವ ನಟಿ ಅಮೂಲ್ಯಾ. ತಮ್ಮ ಮುಗ್ಧ ಹಾಗೂ ಸಹಜ ನಟನೆಯ ಕಾರಣದಿಂದ ಗೋಲ್ಡನ್ ಕ್ವೀನ್ ಎಂದೇ ಹೆಸರು ಪಡೆದವರು.
ಚಿಕ್ಕ ವಯಸ್ಸಿನಲ್ಲಿಯೇ ಟಿವಿ ಕಿರುತೆರೆಗಳಲ್ಲಿ ನಟಿಸಿ ಬಾಲ ನಟಿಯಾಗಿ ಗುರುತಿಸಿಕೊಂಡವರು ಈ ನಟಿ. ನಂತರ ಚೆಲುವಿನ ಚಿತ್ತಾರ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿ ಮಿಂಚಿದವರು.2017ರಲ್ಲಿ ಜಗದೀಶ್ ಅವರನ್ನು ಮದುವೆಯಾದ ಅಮೂಲ್ಯಾ, ಚಿತ್ರರಂಗದಿಂದ ದೂರವಿದ್ದರು. ಕಳೆದ ಮಾರ್ಚ್ನಲ್ಲಿ ಅವಳಿ ಗಂಡು ಮಕ್ಕಳ ತಾಯಿ ಕೂಡ ಆಗಿದ್ದಾರೆ.