ಸರಕಾರಿ ಸೌಲಭ್ಯಗಳಿ೦ದ ವಂಚಿತನಾದ ಅಮೀತ

  • In State
  • March 7, 2020
  • 461 Views
ಸರಕಾರಿ ಸೌಲಭ್ಯಗಳಿ೦ದ ವಂಚಿತನಾದ ಅಮೀತ

ಚಿಕ್ಕೋಡಿ, ಮಾ. 07: ಚಿಕ್ಕೋಡಿ ಸದಲಗಾ ಮತಕ್ಷೇತ್ರದಲಿ ದೊಡ್ಡ ಪಟ್ಟಣವಾಗಿರುವ  ಸದಲಗಾ ಪಟ್ಟಣದ ಅಪ್ಪಾಸಾಬ ಅಂಕಲಿ ಅವರು ಟ್ರ್ಯಾಕ್ಟರ್ ಡ್ರೈವರ್ ಆಗಿದ್ದು, ಇವರ ಮಗ ಅಮೀತ ಅಂಕಲಿ (27) ಎಂಬ ಬಾಲಕ ಹುಟ್ಟು ಅಂಗವಿಕಲನಾಗಿದ್ದು, ಸರ್ಕಾರಿ ಸೌಲಭ್ಯದಿಂದ ವಂಚಿತನಾಗಿದ್ದಾನೆ‌.

ಅಂಕಲಿ ಅವರು ಕಡು ಬಡತನದಲ್ಲಿದ್ದು ಇರುವ ಒಬ್ಬನೇ ಮಗ, ವೊರ್ವ ಪುತ್ರಿಯಿದ್ದು, ಅವಳ ವಿವಾಹವಾಗಿದೆ. ಮಗ ಅಂಗವಿಕಲತೆಯಿಂದ ಬಳಲುತ್ತಿದ್ದರಿಂದ ತಾಯಿ ಹೌಸಾಬಾಯಿ ಅಪ್ಪಾಸಾಬ ಅಂಕಲಿ ಅವರು ಮನೆಯಲ್ಲಿದ್ದು ಮನೆಕೆಲಸ ಮಾಡುತ್ತಾ ಮಗನ ಸೇವೆ ಮಾಡಬೇಕಿದ್ದು, ಈ ತಾಯಿ ಹೊರಗಡೆ ಕೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ಕುಟುಂಬಕ್ಕೆ ಆಸರೆಯಾಗಬೇಕಾದ ಮಗ ಈಗ ಅಂಗವೈಕಲ್ಯತೆಯಿಂ‌ದ ಮನೆಯಲ್ಲಿ ಇದ್ದು ಇತನಿಗೆ ಸರ್ಕಾರಿ ಸೌಲಭ್ಯ ಸರಿಯಾಗಿ ದೊರಕದೆ ವಂಚಿತನಾಗಿದ್ದಾನೆ.

ಇತನಿಗೆ ಆಧಾರ ಕಾರ್ಡ ಇಲ್ಲದ್ದರಿಂದ ಸೌಲಭ್ಯಗಳು ಸಿಗದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಕೇವಲ ತಿಂಗಳಿಗೆ 600 ರೂಪಾಯಿ ಮಾಶಾಸನ ಬರುತ್ತದೆ ಶೇಕಡಾ 90% ರಷ್ಟು ಅಂಗವಿಕಲತೆಯಿಂದ ಬಳಲುತ್ತಿರುವ ಅಮೀತ ಅಂಕಲಿ ಅವರಿಗೆ ಆಧಾರ ಕಾರ್ಡ ನೀಡಿ  ಸರ್ಕಾರದಿಂದ ಬರುವ ಸೌಲಭ್ಯವನ್ನು ದೊರಕಿಸಿ ಕೊಡಬೇಕು ಎಂದು ಅನೇಕರು ಒತ್ತಾಯಿಸಿದರು ಏನೂ ಪ್ರಯೋಜನವಾಗಿಲ್ಲ. ಈ ಕಡೆ ಗಮನ ಹರಿಸಿದ ಅಧಿಕಾರಿಗಳು. ಈಗಲಾದರೂ ಅಧಿಕಾರಿಗಳು ಬಡ ಕುಟುಂಬಕ್ಕೆ ಅಧಿಕಾರಿಗಳು ಆಸರೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ ಯಲ್ಲಪ್ಪ ಮಬನೂರ

 

Related