ಉಗ್ರರಿಗೆ ಅಮೇರಿಕ ಎಚ್ಚರಿಕೆ

ಉಗ್ರರಿಗೆ ಅಮೇರಿಕ ಎಚ್ಚರಿಕೆ

ಅಫ್ಘಾನ್‌ನಲ್ಲಿ ತಾಲಿಬಾನ್ ಉಗ್ರರ ಹಟ್ಟಹಾಸ ಹೆಚ್ಚಿದೆ. ಭಯಭೀತಿಗೊಂಡ ಜನ ಜೀವ ಉಳಿಸಿಕೊಳ್ಳಲು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅಮೇರಿಕ ಸೇನೆಯನ್ನು ಹಿಂಪಡೆದಿದ್ದು, ಅಮೇರಿಕಾ ತಮ್ಮ ಸೇನೆಯನ್ನು ಹಿಂಪಡೆಯುತ್ತಿದ್ದಂತೆ, ತಾಲಿಬಾನ್ ಉಗ್ರರು ಅಫ್ಘಾನ್‌ನನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ರಕ್ತದೋಕುಳಿ ಹರಿಸಿದ್ದಾರೆ.

ಪ್ರಾಣ ಉಳಿಸಿಕೊಳ್ಳಲು ಸಾವಿರಾರು ಜನ, ಕಾಬೂಲ್ ವಿಮಾನ ನಿಲ್ದಾಣದತ್ತ ಧಾವಿಸುತ್ತಿದ್ದಾರೆ. ಅಲ್ಲಿಯೂ ನೂಕುನುಗ್ಗಲುಂಟಾಗಿ ಕೆಲವರ ಪ್ರಾಣಪಕ್ಷಿಯೂ ಹಾರಿ ಹೋಗಿದೆ. ವಿಮಾನ ಹಾರಾಟ ಕೂಡ ಸ್ಥಗಿತಗೊಂಡಿದೆ. ಇದಕ್ಕೆ ಕಾರಣ ಅಮೇರಿಕ ಸೇನೆಯನ್ನು ಹಿಂಪಡೆದಿದ್ದು ಎಂದು ಅಫ್ಘಾನ್ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಫ್ಘಾನ್‌ನಿಂದ ಸೇನಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಅಮೇರಿಕಾ ಬದ್ದವಾಗಿದೆ. ನಮ್ಮ ಸೇನಾ ಸಿಬ್ಬಂದಿಯ ಮೇಲೆ ನೀವೇನಾದರು ದಾಳಿ ಮಾಡಿದ್ರೆ ಅಥವಾ ನಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ. ಅತ್ಯಂತ ತೀಕ್ಷ್ಣ ರೀತಿಯಲ್ಲಿ ಪ್ರತಿಕ್ರಿಯಿಸಲಾಗುತ್ತದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡೆನ್ ಉಗ್ರರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಅಫ್ಘಾನ್‌ನಲ್ಲಿ ಅಮೇರಿಕಾದ ಸುಧೀರ್ಘ ಸಮರವನ್ನು ೨೦ ವರ್ಷಗಳ ಬಳಿಕಾ ಮುಕ್ತಾಯಗೊಳಿಸಲಾಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಸೇನಾ ಪಡೆಯನ್ನೂ ನಿಯೋಜಿಸಿದರು ಅಫ್ಘಾನ್‌ನನ್ನು ರಕ್ಷಿಸುವುದು ಸಾಧ್ಯವಿಲ್ಲ, ಇದಕ್ಕೆ ಹಿಂದೆ ಮತ್ತು ಈಗ ನಡೆಯುತ್ತಿರುವ ಘಟನೆಗಳೆ ಸಾಕ್ಷಿ ಎಂದಿದ್ದಾರೆ.

ಅಫ್ಘಾನ್‌ನಲ್ಲಿ ಯುದ್ಧ ನಡೆದಾಗ ನಮ್ಮ ಸೈನಿಕರಿಗೆ ಗಂಭೀರಗಾಯಗಳಾಗುತ್ತವೆ, ಜೀವಗಳೂ ಬಲಿಯಾಗಿವೆ. ಇದರಿಂದ ಸೈನಿಕರ ಕುಟುಂಬ ಸಂಕಷ್ಟಕ್ಕೊಳಲಾಗಿದೆ. ನಿರಂತರವಾಗಿ ಮತ್ತೊಂದು ರಾಷ್ಟ್ರದ ನಾಗರೀಕ ಯುದ್ಧದಲ್ಲಿ ನಮ್ಮ ಸೇನಾಪಡೆಗಳಿಗೆ ಹೋರಾಡುವಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಜೋ ಬೈಡೆನ್ ಹೇಳಿದ್ದಾರೆ.

ಭಾರತ ಕೂಡ ವಾಯುಪಡೆಯ ವಿಶೇಷ ವಿಮಾನದ ಮೂಲಕ ಅಪ್ಘಾನ್‌ನಲ್ಲಿರುವ ತಮ್ಮ ರಾಯಬಾರಿ, ಸಿಬ್ಬಂದಿಗಳನ್ನು ಕರೆಸಿಕೊಳ್ಳಲು ಮುಂದಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

Related