ಆಂಬುಲೆನ್ಸ್ ನಲ್ಲಿ ಮದ್ಯಪಾನ -ಪಾರ್ಟಿ

ಆಂಬುಲೆನ್ಸ್ ನಲ್ಲಿ ಮದ್ಯಪಾನ -ಪಾರ್ಟಿ

ಮುಂಬಯಿ : ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ಒಂದೆಡೆ ಅಧಿಕಾರಿಗಳು ಆಂಬುಲೆನ್ಸ್ ಗಳ ಅಗತ್ಯತೆಯ ಬಗ್ಗೆ ಗಮನ ಹರಿಸುತ್ತಿರುವಾಗ ಇನ್ನೊಂದೆಡೆ ಆಸ್ಪತ್ರೆಯ ಆವರಣದಲ್ಲಿ ಆಂಬುಲೆನ್ಸ್ ನೊಳಗೆ ಮದ್ಯಪಾನಗೈದು ಪಾರ್ಟಿ ಮಾಡುತ್ತಿದ್ದ ಕಾರ್ಮಿಕರ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ.

ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ಭಾಯಂದರ್ ಪಶ್ಚಿಮದ ತೆಂಬಾದಲ್ಲಿರುವ ಪಂಡಿತ್ ಭೀಮ್ ಸೇನ್ ಜೋಶಿ ಆಸ್ಪತ್ರೆಯ ಕಾಂಪೌಂಡ್ ನಲ್ಲಿ ಕೋವಿಡ್-19 ಸೌಲಭ್ಯಕ್ಕೆಂದು ಮೀಸಲಾದ ಆಂಬುಲೆನ್ಸ್ ನಲ್ಲಿ ರಾತ್ರಿ 11.45 ರ ಸುಮಾರಿಗೆ ಕಾರ್ಮಿಕರ ಗುಂಪು ಮದ್ಯಪಾನ ಮಾಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಾಯಂದರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನೀಶಾ ಪಾಟೀಲ್ ಹಾಗೂ ಇತರ ಪೊಲೀಸರು ಆಂಬುಲೆನ್ಸ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Related