ಅಂಬೇಡ್ಕರ್ ಪುತ್ಥಳಿ ಶುದ್ಧೀಕರಣ

ಅಂಬೇಡ್ಕರ್ ಪುತ್ಥಳಿ ಶುದ್ಧೀಕರಣ

ಮಹದೇವಪುರ: ಅಂಬೇಡ್ಕರ್ ಅವರು ಬದುಕಿದ್ದ ಕಾಲಕ್ಕಿಂತ ಅತೀ ಪ್ರಭಾವಶಾಲಿಯಾಗಿ ನಂತರದ ದಿನಗಳಲ್ಲಿ ಪ್ರಜ್ವಲಿಸುತ್ತಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.
ಚೈತ್ಯ ಭೂಮಿ ಚಲೋ 8 ನೇ ಮುಂಬೈ ಮಹಾ ಯಾತ್ರೆ ಅಂಗವಾಗಿ ಇಂದು ಕ್ಷೇತ್ರದ ದಿನ್ನೂರು ಗ್ರಾಮದಲ್ಲಿ ಸ್ವಚ್ಛಗೊಳಿಸಿದ ಡಾ.ಅಂಬೇಡ್ಕರ್ ಪುತ್ತಳಿಗೆ ಪುಶ್ಪಮಾಲೆ ಹಾಕಿ ಜ್ಯೋತಿ ಬೆಳಗಿ ಅವರು ಮಾತನಾಡಿದರು. ಜಗತ್ತಿನಲ್ಲಿ ಅತಿ ಹೆಚ್ಚಿನ ಪ್ರತಿಮೆ ಇದ್ದರೆ ಅದು ಅಂಬೇಡ್ಕರ್ ರವರದಾಗಿದ್ದು ಅದರ ಸ್ವಚ್ಚತೆ ಮಾಡುವುದು, ಅವರು ಸೂಚಿಸಿರುವ ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜನರಿಗೆ ಅರಿವು ಮೂಡಿಸಬೇಹು ಎಂದರು.
ಅಂಬೇಡ್ಕರ್ ರವರು ಬದುಕಿದ್ದ ಕಾಲಕ್ಕಿಂತ ಅತೀ ಪ್ರಭಾವಶಾಲಿಯಾಗಿ ನಂತರದ ದಿನಗಳಲ್ಲಿ ಪ್ರಜ್ವಲಿಸುತ್ತಿದೆ. ಅಂದು ಇವರನ್ನು ರೂಪಿಸಲು ಸಹಕರಿಸಿದ ಛತ್ರಪತಿ ಸಾಹು ಮಹಾರಾಜ್, ಪಯ್ಯಾಜಿ ರಾವ್ ಗಾಯಂಕವಾಡ್ , ಮಾತಾ ರಮಾಭಾಯಿ ಅಂಬೇಡ್ಕರ್, ನಾನಾಕ್ ಚಂದ್ ರತ್ತು ಮುಂತಾದ ಸ್ನೇಹಿತರು, ಹಿತೈಷಿಗಳನ್ನು ಕೃತಜ್ಞತಾ ಭಾವದಿಂದ ನಾವೆಲ್ಲಾ ಸ್ಮರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಘ.ಅ. ಕೃಷ್ಣಪ್ಪ, ಸಂ.ಕಾರ್ಯದರ್ಶಿ ಬೆಳತೂರು ವೆಂಕಟೇಶ್, ರಾಜ್ಯ ನಾಯಕರಾದ ಬಿ.ಕೃಷ್ಣಪ್ಪ, ಡಿ.ಪಿ.ಐ.ರಾಜಣ್ಣ, ಬೆಂ.ಪೂ.ತಾ.ಅದ್ಯಕ್ಷ ಕಾವೇರಪ್ಪ, ನಾಗರಾಜು, ಶಿರೀಷಾ, ಜ್ಯೋತಿ, ರಾಜು, ಮಂಜುನಾಥ್ ಹಾಗೂ ಬಷೀರ್ ಹಾಜರಿದ್ದರು.

Related