ಕೇರಳದಲ್ಲೂ ಕೊರೋನಾ …!

ಕೇರಳದಲ್ಲೂ ಕೊರೋನಾ …!

ಕೊಚ್ಚಿ, ಮಾ. 9 : ಒಂದೇ ಕುಟುಂಬದ ಐವರಿಗೆ ಮಾರಕ ಕೋವಿಡ್-19 ವೈರಾಣು ಪತ್ತೆಯಾಗಿ ಆತಂಕ ಮೂಡಿಸಿರುವ ಕೇರಳದಲ್ಲಿ ಮೂರು ತಿಂಗಳ ಹಸುಳೆಗೂ ಕೊರೋನಾ ಸೋಂಕು ತಗುಲಿದೆ.
ಇಟಲಿಯಿಂದ ಮಾ.7ರಂದು ಮುಂಜಾನೆ 6 ಗಂಟೆಗೆ ಕೊಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ದಂಪತಿ ಮತ್ತು ಮಗುವನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಮೂರು ತಿಂಗಳ ಶಿಶುವಿನಲ್ಲಿ ಕೊರೋನಾ ವೈರಾಣು ಸೋಂಕುವಿನ ರೋಗ ಲಕ್ಷಣಗಳು ಕಂಡುಬಂದ ನಂತರ ಕೊಚ್ಚಿನ ಕಲಾಮಸ್ದರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ಧಾರೆ.

ಮಗುವಿನ ಸ್ಯಾಂಪಲ್ಅನ್ನು ಆಳಪುಳದ ಎನ್ಐವಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಫಲಿತಾಂಶದಲ್ಲಿ ಹಸುಳೆಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

Related