ಕೈ ವಿರುದ್ಧ ಭ್ರಷ್ಟಾಚಾರದ ಆರೋಪ, ಸಿದ್ದರಾಮಯ್ಯ ನಡಿಗೆ ಮತ್ತು ಗತ್ತಿನಲ್ಲಿ ಬದಲಾವಣೆಯಿಲ್ಲ

ಕೈ ವಿರುದ್ಧ ಭ್ರಷ್ಟಾಚಾರದ ಆರೋಪ, ಸಿದ್ದರಾಮಯ್ಯ ನಡಿಗೆ ಮತ್ತು ಗತ್ತಿನಲ್ಲಿ ಬದಲಾವಣೆಯಿಲ್ಲ

ಬೆಂಗಳೂರು: ರಾಜ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗಾಗಲೇ ಭ್ರಷ್ಟಾಚಾರದ ಆರೋಪಗಳು ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕೇಳಿ ಬರುತ್ತಿದೆ, ಆದ್ದರಿಂದ ವಿಪಕ್ಷ ನಾಯಕರಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ.

ಇನ್ನು ರಾಜ್ಯ ಸರ್ಕಾರದ ಭ್ರಷ್ಟಾಚಾರ ಕೇಳಿ ಬರುತ್ತಿದ್ದರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ಗತ್ತಿನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದು ತಿಳಿದು ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಪುಟ ಸಭೆ ಕರೆದಿರುವ ಹಿನ್ನೆಲೆಯಲ್ಲಿ ವಿಧಾನ ಸೌಧಕ್ಕೆ ಆಗಮಿಸಿದರು. ಸರ್ಕಾರದ ವಿರುದ್ಧ 10-15 ಪರ್ಸೆಂಟ್ ಕಮೀಶನ್ ಅರೋಪ ಮಾಡುತ್ತಿರುವುದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೂ ಮುಖ್ಯಮಂತ್ರಿಯವರ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ.

ಅವರ ನಡಿಗೆಯಲ್ಲಿ ಎಂದಿನ ಗಾಂಭೀರ್ಯತೆ ಮತ್ತು ಠೀವಿ! ಅವರ ಹಿಂದೆ ಯಾವಾಗಲೂ ಒಂದು ಪಟಾಲಂ ಇರುತ್ತದೆ. ಸಿದ್ದರಾಮಯ್ಯ ವಿಧಾನ ಸೌಧ ಒಳಗಡೆ ಪ್ರವೇಶಿಸುವ ಮೊದಲು ಹಿರಿಯ ವ್ಯಕ್ತಿಯೊಬ್ಬರು ಅವರ ಪಾದಮುಟ್ಟಿ ನಮಸ್ಕಾರ ಮಾಡಿ ಮಾಧ್ಯಮದ ಕೆಮೆರಾಗಳ ಕಡೆ ನೋಡುತ್ತಾರೆ. ತಾನು ಮಾಡಿದ್ದು ಕೆಮೆರಾದಲ್ಲಿ ಸೆರೆಯಾಯಿತೋ ಇಲ್ಲವೋ ಅಂತ ಕೇಳುವಂತಿತ್ತು ಅವರ ಮುಖಭಾವ.

ಸಂಪುಟ ಸಭೆಯಲ್ಲಿ ನಿಸ್ಸಂದೇಹವಾಗಿ ಭ್ರಷ್ಟಾಚಾರದ ಆರೋಪಗಳ ಮೇಲೆ ಗಹನವಾದ ಚರ್ಚೆ ನಡೆಯಲಿರುವುದು ನಿಶ್ಚಿತ. ನಿಮಗೆ ನೆನಪಿರಬಹುದು, ಕಳೆದ ವಾರ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಸಿದ್ದರಾಮಯ್ಯ ಸಂಪುಟದ ಸಚಿವರು ಮತ್ತು ಕೆಲ ಹಿರಿಯ ನಾಯಕರರೊಂದಿಗೆ ನಡೆಸಿದ ಸಭೆಯಲ್ಲಿ ಭ್ರಷ್ಟಾಚಾರದ ಅರೋಪಗಳು ಕೇಳಿಬರುತ್ತಿರುವ ಬಗ್ಗೆ ಚರ್ಚೆ ನಡೆಸಿತ್ತು ಮತ್ತು ನಾಯಕರನ್ನು ತರಾಟೆಗೆ ತೆಗೆದುಕೊಂಡಿತ್ತು.

Related