ಮುದ್ದು ಮುದ್ದಾದ ಆಲಿಯಾ-ರಣಬೀರ್ ಮಗಳು

ಮುದ್ದು ಮುದ್ದಾದ ಆಲಿಯಾ-ರಣಬೀರ್ ಮಗಳು

ಬಾಲಿವುಡ್ ನ ಅತಿ ಬೇಡಿಕೆ ಉಳ್ಳ ನಟಿ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್ ಅವರ ದಂಪತಿಗಳ ಮಗಳನ್ನು ಇದೇ ಮೊದಲ ಬಾರಿಗೆ ಜಗತ್ತಿಗೆ ತೋರಿಸಿದ್ದಾರೆ.

ಮುದ್ದು ಮುದ್ದಾದ ಕಣ್ಣುಗಳಿಂದ ಕ್ಯಾಮೆರಾಗಳಿಗೆ ಫೋಸ್ ನೀಡಿದ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್ ಅವರ ಮಗಳು ರಹಾ ಬಹಳ ಮುದ್ದಾಗಿ ಕಾಣುತ್ತಿದೆ.

ಹೌದು, ಇದೇ ಮೊದಲ ಬಾರಿಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಮಗಳ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. ಪುತ್ರಿಗೆ ರಹಾ ಎಂದು ಹೆಸರು ಇಟ್ಟಿರುವ ಈ ದಂಪತಿ, ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಎದುರು ಮಗಳ ಜೊತೆ ಪೋಸ್​ ನೀಡಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್​ ಆಗಿವೆ. ಸಖತ್​ ಕ್ಯೂಟ್​ ಆಗಿರುವ ರಹಾ ಮುಖವನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಪರಸ್ಪರ ಪ್ರೀತಿಸಿ, 2022ರ ಏಪ್ರಿಲ್​ 14ರಂದು ಮದುವೆಯಾದರು. ಅದೇ ವರ್ಷ ನವೆಂಬರ್​ 6ರಂದು ಹೆಣ್ಣು ಮಗುವಿಗೆ ಆಲಿಯಾ ಭಟ್​ ಜನ್ಮ ನೀಡಿದರು. ಅವರು ಮನೆಯಲ್ಲಿ ಮಗಳನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ರಹು, ರಾರಾ, ಲಾಲಿಪಾಪ್ ಅಂತ ಮಗಳನ್ನು ಮುದ್ದಾಗಿ ಕರೆಯುತ್ತೇವೆ ಎಂದು ಇತ್ತೀಚಿಗೆ ಆಲಿಯಾ ಭಟ್​ ಹೇಳಿದ್ದರು.

 

 

Related