ಉಗ್ರರ ಕಲ್ಲುತೂರಾಟಕ್ಕೆ ಪೈಲೆಟ್ ಬಲಿ

ಉಗ್ರರ ಕಲ್ಲುತೂರಾಟಕ್ಕೆ ಪೈಲೆಟ್ ಬಲಿ

ಆಫ್ಘನ್ ನಲ್ಲಿ ಉಗ್ರರ ಹಟ್ಟಹಾಸ ಹೆಚ್ಚುತ್ತಿದ್ದು, ಉಗ್ರರಿಂದ  ಕಲ್ಲುತೂರಾಟಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಆಫ್ಘನ್ ಜನಪ್ರೀಯ ಮಹಿಳಾ ಪೈಲೆಟ್ ಸಫಿಯಾ ಫಿರೋಜ್(30,ವರ್ಷ) ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಆಫ್ಘಾನ್ ವಾಯುಪಡೆಯಲ್ಲಿ ದೇಶದ ಎರಡನೇ ಪೈಲೆಟ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಸಫಿಯಾ ಫಿರೋಜ್ಗೆ ಸಲ್ಲುತ್ತದೆ.

ಅತ್ಯಂತ ಶ್ರಮಜೀವಿ ಮತ್ತು ಪ್ರತಿಭಾವಂತ ಪೈಲೆಟ್ ಫಿರೋಜ್ ತಾಲಿಮಾನಿಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಾವಿನ ಸುದ್ದಿ ತಿಳಿಯುತ್ತಿದಂತೆ ಸಹೋದ್ಯೋಗಿಗಳು, ಸ್ನೇಹಿತರು ಆತ್ಮಕ್ಕೆ ಶಾಂತಿ ಕೋರಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

Related