ಇಂದು ತಿರುಪತಿಯಲ್ಲಿ ಆದಿಪುರುಷ್ ಪ್ರೀ ರಿಲೀಸ್ ಇವೆಂಟ್

ಇಂದು ತಿರುಪತಿಯಲ್ಲಿ ಆದಿಪುರುಷ್ ಪ್ರೀ ರಿಲೀಸ್ ಇವೆಂಟ್

ತಿರುಪತಿ: ಪ್ರಭಾಸ್​ ಮತ್ತೊಂದು ಮೆಗಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭಾರತದ ಈವರೆಗಿನ ಅತಿದೊಡ್ಡ ಬಜೆಟ್​ ಸಿನಿಮಾ ಎಂದೇ ಹೇಳಲಾಗುತ್ತಿರುವ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಬಿಡುಗಡೆ ದಿನಾಂಕ ಸನಿಹ ಬಂದಿದೆ.

ಇಂದು ಜೂನ್ 6 ರಂದು ತಿರುಪತಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಭಾರಿ ಅದ್ಧೂರಿಯಾಗಿ ನಡೆಯಲಿರುವ ಈ ಇವೆಂಟ್​ಗೆ ಸಕಲ ಸಿದ್ಧತೆ ನಡೆದಿದೆ. ಆದಿಪುರುಷ್ ಸಿನಿಮಾ ಬಗ್ಗೆ ತೀವ್ರ ನಿರೀಕ್ಷೆ ಇಟ್ಟುಕೊಂಡಿರುವ ನಟ ಪ್ರಭಾಸ್, ಪ್ರೀ ರಿಲೀಸ್ ಇವೆಂಟ್ ಯಶಸ್ವಿಯಾಗಬೇಕು ಎಂದು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದ್ದಾರೆ. ನಿರ್ದೇಶಕ ಓಂ ರಾವತ್ ಹಾಗೂ ಇನ್ನಿತರರ ಜೊತೆ ಪ್ರಭಾಸ್ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಿರುಮಲ ಆಡಳಿತ ಮಂಡಳಿ ಸದಸ್ಯರು ಪ್ರಭಾಸ್ ಹಾಗೂ ಆದಿಪುರುಷ್ ಚಿತ್ರತಂಡವನ್ನು ಸನ್ಮಾನ ಮಾಡಿದೆ.

ತಿರುಪತಿಯ ಶ್ರೀ ವೆಂಕಟೇಶ್ವರ್ ವಿಶ್ವವಿದ್ಯಾಲಯದ ದೊಡ್ಡ ಮೈದಾನದಲ್ಲಿ ಭಾರಿ ದೊಡ್ಡ ವೇದಿಕೆಯನ್ನು ಹಾಕಲಾಗಿದ್ದು ಹಲವು ರಾಜಕೀಯ ಪ್ರಮುಖರು, ತೆಲುಗು, ತಮಿಳು, ಸ್ಯಾಂಡಲ್​ವುಡ್​ನ ಕೆಲವು ಹಿರಿಯ ನಟರು ಸಹ ಇವೆಂಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಜೊತೆಗೆ ತಿರುಮಲದ ಚಿನ್ನ ಜೀಯಾರ್ ಸ್ವಾಮಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ.

 

Related