ಪವಿತ್ರ ಲೋಕೇಶ್ ಕತ್ತಲ್ಲಿ ನರೇಶ್ ತಾಯಿಯ ನೆಕ್ಲೆಸ್ ಇದೆಯಾ ?

  • In Cinema
  • July 2, 2022
  • 286 Views
ಪವಿತ್ರ ಲೋಕೇಶ್ ಕತ್ತಲ್ಲಿ ನರೇಶ್ ತಾಯಿಯ ನೆಕ್ಲೆಸ್ ಇದೆಯಾ ?

ಬೆಂಗಳೂರಿನಲ್ಲಿಯೇ ನಾನು ಚಿನ್ನಾಭರಣ ಖರೀದಿಸುತ್ತೇನೆ.  ನನಗೆ ಪರಿಚಯವಿರುವ ವ್ಯಾಪಾರಿಗಳಿಂದ ಖರೀದಿಸುತ್ತೇನೆ ನನಗೆ ಯಾರು ಡೈಮಂಡ್ ನೆಕ್ಲೇಸ್ ಕೊಟ್ಟಿಲ್ಲ ಎಂದು ನಟಿ ಪವಿತ್ರಾ ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ.

ನಟಿ ಪವಿತ್ರಾ ಲೋಕೇಶ್​ ಹಾಗೂ ಟಾಲಿವುಡ್​ ನಟ ನರೇಶ್​ ಸಂಬಂಧದ ಕುರಿತು ಹುಟ್ಟಿಕೊಂಡಿರುವ ಸುದ್ದಿಗಳಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಇದೀಗ ಡೈಮಂಡ್​ ನೆಕ್ಲೇಸ್​ ಬಗ್ಗೆ ನರೇಶ್​ ಮೂರನೇ ಪತ್ನಿ ರಮ್ಯಾ ಮಾಡಿರುವ ಆರೋಪಕ್ಕೆ ಪವಿತ್ರಾ ಲೋಕೇಶ್​ ತಿರುಗೇಟು ನೀಡಿದ್ದಾರೆ. ನರೇಶ್ ಪತ್ನಿ ರಮ್ಯಾ ರಘುಪತಿ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ನನ್ನ ಅತ್ತೆ 2014 ರಲ್ಲಿ ಖರೀದಿಸಿದ್ದ ನೆಕ್ಲೇಸ್ ಇದು. ನನ್ನ ಅತ್ತೆ ಪ್ರತಿ ಹುಟ್ಟುಹಬ್ಬಕ್ಕೂ ಚಿನ್ನಾಭರಣ ಖರೀದಿಸುತ್ತಿದ್ದರು . ಈಗ ಪವಿತ್ರಾ ಲೋಕೇಶ್ ಧರಿಸಿದ್ದ ನೆಕ್ಲೇಸ್ ನನ್ನ ಅತ್ತೆಯದ್ದು.  ನನ್ನ ಅತ್ತೆ ಬಳಿಯಿದ್ದ ನೆಕ್ಲೇಸ್ ನಾನು ನೋಡಿದ್ದೇನೆ. ಪವಿತ್ರಾ ಲೋಕೇಶ್ ಅದೇ ನೆಕ್ಲೇಸ್ ಧರಿಸಿದ್ದರು ಎಂದು ಆರೋಪ ಮಾಡಿದ್ದಾರೆ.

ಆದರೆ ರಮ್ಯಾ ಆರೋಪ ಅಲ್ಲಗೆಳೆದಿರುವ ನಟಿ ಪವಿತ್ರಾ ಲೋಕೇಶ್,  ನನಗೆ ಬೇಕಾದ ವಸ್ತು ಖರೀದಸುವ ಶಕ್ತಿ ನನಗಿದೆ ಕೇವಲ ಚಿನ್ನಾಭರಣ ಮಾತ್ರವಲ್ಲ, ಆಸ್ತಿಯನ್ನೂ ಮಾಡಿದ್ದೇನೆ.  2 ಫ್ಲ್ಯಾಟ್, ನಿವೇಶನಗಳನ್ನು ನಾನು ಖರೀದಿಸಿದ್ದೇನೆ. ಎಲ್ಲದ್ದಕ್ಕೂ ನನ್ನ ಬಳಿ ದಾಖಲೆಗಳಿವೆ ಎಂದಿದ್ದಾರೆ.

ಬೆಂಗಳೂರಿನಲ್ಲಿಯೇ ನಾನು ಚಿನ್ನಾಭರಣ ಖರೀದಿಸುತ್ತೇನೆ.  ನನಗೆ ಪರಿಚಯವಿರುವ ವ್ಯಾಪಾರಿಗಳಿಂದ ಖರೀದಿಸುತ್ತೇನೆ ನನಗೆ ಯಾರು ಡೈಮಂಡ್ ನೆಕ್ಲೇಸ್ ಕೊಟ್ಟಿಲ್ಲ ಎಂದು ನಟಿ ಪವಿತ್ರಾ ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ.

ಆದರೆ  ಪವಿತ್ರ ಲೋಕೇಶ್ ಧರಿಸಿರೋ ಡೈಮಂಡ್ ನೆಕ್ಲೆಸ್ ಬಗ್ಗೆ ಅನುಮಾನ ಹುಟ್ಟಿಕೊಂಡಿದ್ದು, ತೆಲುಗು ಹಾಸ್ಯನಟ ಆಲಿ ಬರ್ತ್ಡೇ ಪಾರ್ಟಿಯಲ್ಲಿ ಡೈಮಂಡ್ ನೆಕ್ಲೆಸ್ ಹಾಕಿಕೊಂಡು ಮಿಂಚಿರುವ ಪವಿತ್ರಾ ಫೋಟೋಗಳು ಸದ್ಯ ವೈರಲ್​ ಆಗಿದೆ. ನರೇಶ್ ಹೋಗಿರುವ ಪಾರ್ಟಿಗೆ  ಡೈಮಂಡ್ ನೆಕ್ಲೆಸ್  ಧರಿಸಿ ಪವಿತ್ರಾ ಹೋಗಿದ್ದು,  ಪವಿತ್ರಾ ಲೋಕೇಶ್ ಗೆ ಡೈಮೆಂಡ್ ನೆಕ್ಲೇಸ್ ಕೊಟ್ಟಿದ್ದಾರಾ ನರೇಶ್​ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Related