ಚಲ್ತೆ ಚಲ್ತೆ’ ಚಿತ್ರದ ನಟ ವಿಶಾಲ್ ಆನಂದ್ ಇನ್ನಿಲ್ಲ

ಚಲ್ತೆ ಚಲ್ತೆ’ ಚಿತ್ರದ ನಟ ವಿಶಾಲ್ ಆನಂದ್ ಇನ್ನಿಲ್ಲ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ೨೦೨೦ನೇ ರ‍್ಷ ಕರಾಳ ರ‍್ಷ ಎನ್ನಬಹುದು. ಈ ರ‍್ಷ ಹಲವು ಸೆಲೆಬ್ರಿಟಿಗಳು ಕೊನೆಯುಸಿರೆಳೆದರು. ಇದೀಗ, ಹಿಂದಿ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ವಿಶಾಲ್ ಆನಂದ್ (೮೧) ನಿಧನರಾಗಿದ್ದಾರೆ.

ಹೆಸರು ಬದಲಿಸಿಕೊಂಡಿದ್ದ ವಿಶಾಲ್ ಆನಂದ್ ಮೂಲ ಹೆಸರು ಭೀಷ್ಮಾಮ್ ಕೊಹ್ಲಿ. ದರ‍್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

೧೯೭೬ರಲ್ಲಿ ತೆರೆಕಂಡಿದ್ದ ‘ಚಲ್ತೆ ಚಲ್ತೆ’ ಚಿತ್ರದ ಮೂಲಕ ಬಹಳ ದೊಡ್ಡ ಖ್ಯಾತಿ ಗಳಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಿಮಿ ಅರ‍್ವಾಲ್ ಎದುರು ನಟಿಸಿದ್ದರು. ವೃತ್ತಿ ಜೀವನದಲ್ಲಿ ಸುಮಾರು ೧೧ ಚಿತ್ರಗಳಲ್ಲಿ ವಿಶಾಲ್ ಆನಂದ್ ಬಣ್ಣ ಹಚ್ಚಿದ್ದರು.

ಕೆಲವು ಚಿತ್ರಗಳನ್ನು ನರ‍್ದೇಶನ ಸಹ ಮಾಡಿದ್ದು, ಇನ್ನು ಕೆಲವು ಚಿತ್ರಗಳಿಗೆ ನರ‍್ಮಾಪಕರಾಗಿದ್ದರು ಹಮರಾ ಅಧಿಕಾರ್, ಸಾ-ರೆ-ಗಾ-ಮ-ಪ, ಟ್ಯಾಕ್ಸಿ ಡ್ರೈವರ್, ಇಂತೆಜಾರ್, ಹಿಂದೂಸ್ತಾನ್ ಕಿ ಕಸಮ್, ಚಲ್ತೆ ಚಲ್ತೆ, ದಿಲ್ ಸೆ ಮೈಲ್ ದಿಲ್, ಕಿಸ್ಮೆತ್ ಮತ್ತು ಮೈನೆ ಜೀನಾ ಸಿಖ್ ಲಿಯಾ ಅಂತಹ ಚಿತ್ರಗಳಲ್ಲಿ ವಿಶಾಲ್ ಕಾಣಿಸಿಕೊಂಡಿದ್ದರು.

ನಟ ಪುರಬ್ ಕೊಹ್ಲಿ ಅವರು ವಿಶಾಲ್ ಆನಂದ್ಗೆ ಸಂಬಂಧಿಕ ಎನ್ನುವುದು ಅನೇಕರಿಗೆ ತಿಳಿದಿಲ್ಲ. ವಿಶಾಲ್ ಆನಂದ್ ಅವರ ಸೋದರ ಅಳಿಯ ಪುರಬ್ ಕೊಹ್ಲಿ.

Related