ನಟ ಆತ್ಮಹತ್ಯೆ ಪ್ರಕರಣ- ರಿಯಾ ವಿರುದ್ಧ ಎನ್ ಸಿಬಿ ಬಲೆ..!

  • In Crime
  • July 13, 2022
  • 265 Views
ನಟ ಆತ್ಮಹತ್ಯೆ ಪ್ರಕರಣ- ರಿಯಾ ವಿರುದ್ಧ ಎನ್ ಸಿಬಿ ಬಲೆ..!

ನವದೆಹಲಿ, ಜು 13 : ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ  ಇಂದು ಮುಂಬೈನ ವಿಶೇಷ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದು, ಗೆಳತಿ ರಿಯಾ ಚಕ್ರವರ್ತಿ ಮಾದಕ ವಸ್ತುಗಳ ಸೇವನೆಗೆ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಿದೆ.

ಪ್ರಕರಣ ಸುದೀರ್ಘ ತನಿಖೆಯ ಬಳಿಕ ಈಗ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಚಾರ್ಜ್ಶೀಟ್ನಲ್ಲಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಸೇರಿದಂತೆ ಇತರ ಆರೋಪಿಗಳಿಂದ ಹಲವಾರು ಬಾರಿ ಗಾಂಜಾ ಖರೀದಿಸಿ ಅದನ್ನು ನಟ ಸುಶಾಂತ್ ಸಿಂಗ್ಗೆ ನೀಡಿದ್ದಾಳೆ ಎಂದು ಎನ್ಸಿಬಿ ಉಲ್ಲೇಖಿಸಿದೆ.

ರಿಯಾ ಚಕ್ರವರ್ತಿ, ಶೋವಿಕ್ ಸೇರಿದಂತೆ 35 ಆರೋಪಿಗಳ ವಿರುದ್ಧ 38 ಆರೋಪಗಳನ್ನು ಎನ್ಸಿಬಿ ಹೊರಿಸಿದ್ದು, ಎಲ್ಲಾ ಆರೋಪಿಗಳು ಮಾರ್ಚ್ 2020 ರಿಂದ ಡಿಸೆಂಬರ್ 2020 ರವರೆಗೆ ಪರಸ್ಪರ ಸಂಚು ರೂಪಿಸಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಕಳ್ಳಸಾಗಣೆ ಮೂಲಕ ಮಾರಾಟ ಮಾಡಿದ್ದಾರೆ. ಅಲ್ಲದೇ ಹಲವು ಬಾಲಿವುಡ್ ನಟರಿಗೆ ಮತ್ತು ಮುಂಬೈನ ಹೈ ಪ್ರೊಪೈಲ್ಜನರಿಗೆ ಇವರು ಡ್ರಗ್ ಮಾರಾಟ ಮಾಡಿದ್ದಾರೆ ಎಂದು ಎನ್ಸಿಬಿ ತಿಳಿಸಿದೆ.

Related