ಚಂದನವನಕ್ಕೆ ಎಂಟ್ರಿ ಕೂಟ್ಟ ನಟಿ ಪಾಯಲ್

  • In Cinema
  • August 9, 2021
  • 403 Views
ಚಂದನವನಕ್ಕೆ ಎಂಟ್ರಿ ಕೂಟ್ಟ ನಟಿ ಪಾಯಲ್

ಡಾಲಿ ಧನಂಜಯ್ ನಟನೆ ಹಾಗೂ ನಿರ್ಮಾಣ ಮಾಡಲಿರುವ ಹೆಡ್ ಬುಷ್ ಚಿತ್ರಕ್ಕೆ ನಾಯಕಿಯಾಗಿ ಪಾಯಲ್ ರಜಪೂತ್ ಆಯ್ಕೆಯಾಗಿದ್ದಾರೆ. ಹೆಡ್ ಬುಷ್ ಚಿತ್ರದ ಮೂಲಕ ಟಾಲಿವುಡ್ ನಟಿ ಪಾಯಲ್ ರಜಪೂತ್ ಚಂದನವನಕ್ಕೆ ಎಂಟ್ರಿ ಕೊಡಲಿದ್ದಾರೆ.

ಡಾಲಿ ಪಿಕ್ಚರ್ಸ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯಲಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜವ್ದಾರಿ ಹೊಸ  ಪ್ರತಿಭೆ ಶೂನ್ಯರವರದ್ದು.

ಚಿತ್ರ ಆರು ಭಾಷೆಗಳಲ್ಲಿ ತಯಾರಾಗಲಿದ್ದು, ಧನಂಜಯ್ ಭೂಗತ ಲೋಕದ ಡಾನ್ ಜಯರಾಜ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಆಗಸ್ಟ್ 09 ರಿಂದ ಚಿತ್ರಿಕರಣ ಪ್ರಾರಂಭವಾಗಲಿದ್ದು , ಆಗಸ್ಟ್ 23 ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುವ ಸಾಧ್ಯತೆ ಇದೆ.

Related