‘ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಗಾರ’

‘ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಗಾರ’

ಶಹಾಪುರ: ದೇಶವನ್ನೇ ನವ ದಿಕ್ಕಿನತ್ತ ಚಲಿಸುವಂತೆ ಮಾಡಬಲ್ಲ ಶಿಕ್ಷಣ ನೀತಿಯು ಬಹು ಶಿಸ್ತಿನ ಹಾಗೂ ಬಹು ಆಯ್ಕೆಯ ಕಲಿಕೆಗೆ ಉತ್ತೇಜನ ನೀಡಲಿದ್ದು ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯವನ್ನು ಅಧ್ಯಯನ ಮಾಡಬಹುದಾಗಿದೆ ಎಂದು ಸುರಪೂರ ಪ್ರಭು ಮಹಾವಿದ್ಯಾಲಯದ ಪ್ರಾದ್ಯಾಪಕರಾದ ಸಾಯಿಬಣ್ಣ ಮೂಡಬೂಳ ಹೇಳಿದರು.

ನಗರದ ವಿಶ್ವಜ್ಯೋತಿ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ಒಂದು ದಿನದ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಕೊರೋನಾ ಸೋಂಕು ಶಿಕ್ಷಣ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಭೀರಿದ ಕಾರಣದಿಂದ ತಂತ್ರಜ್ಞಾನ, ಕೌಶಲ್ಯ, ಉದ್ಯೋಗ ಆಧಾರಿತ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಹು ಆಗಮನ ಮತ್ತು ನಿರ್ಗಮನ ಪದ್ಧತಿಗೆ ಈ ನೀತಿ ಮುನ್ನುಡಿ ಬರೆದಿದೆ ಎಂದು ಹೇಳಿದರು.

ಪ್ರಾದ್ಯಾಪಕರಾದ ಡಾ. ಶರಣಗೌಡ ಪಾಟೀಲ್ ಮಾತಾನಾಡಿ ಪ್ರಸಕ್ತ ವರ್ಷದಿಂದಲೇ ಜಾರಿ ಯಾಗುತ್ತೀರುವ ಈ ನೀತಿಯ ನೀಲ ನಕ್ಷೆಯ ಸಮೇತ ಪರಿಣಾಮಕಾರಿಯಾಗಿ ಕಪ್ಪು ಹಲಗೆ ಮೇಲೆ ವಿವರಿಸಿದರು.
ಈ ಸಂದರ್ಭದಲ್ಲಿ  ಪ್ರಾಂಶುಪಾಲರಾದ ತಬೀತಾ ಪ್ರಸಾದ್, ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಮಾಳಪ್ಪ ಕುನ್ನೂರ, ಚಂದ್ರು ಕಾಶಿರಾಜ, ಬಸವರಾಜ, ಇದ್ದರು.

Related