ಲಾರಿಗೆ ಕಾರು ಡಿಕ್ಕಿ: 7 ಜನರ ಸಾವು

  • In Crime
  • September 27, 2020
  • 377 Views
ಲಾರಿಗೆ ಕಾರು ಡಿಕ್ಕಿ: 7 ಜನರ ಸಾವು

ಕಲಬುರಗಿ: ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸೇರಿ ಸ್ಥಳದಲ್ಲೇ 7 ಜನರು ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಇಂದು ಮುಂಜಾನೆ ಆರು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಳಂದ ತಾಲೂಕಿನಿಂದ ಕಲಬುರಗಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಸಮಯದಲ್ಲಿ ಸಾವಳಗಿ ಕ್ರಾಸ್ ಹತ್ತಿರ ಅಪಘಾತ ಸಂಭವಿಸಿದ್ದು, ಗರ್ಭಿಣಿ ಇರ್ಫಾನಾ ಬೇಗಂ(25)ಸೇರಿ ರುಬಿಯಾ ಬೇಗಂ(50) ಅಬೇದಾಬಿ (50) ಜಯಚುನಬಿ(60) ಮುನೀರ್(29) ಮಹಮ್ಮದ್ ಅಲಿ(38) ಶೌಕತ್ ಅಲಿ(29) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ನಿಂತಿದ್ದ ಲಾರಿ ರಸ್ತೆಯ ಬದಿಗೆ ಉರುಳಿದ್ದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಮೃತದೇಹಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವನಿಸಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ

ಹೆರಿಗೆ ನೋವಿನಿಂದ ನರಳುತ್ತಿದ ಇರ್ಫಾನಾ ಬೇಗಂಗೆ ಹೆರಿಗೆ ಮಾಡಿಸಲು ಕಲಬುರಗಿಗೆ ಕರೆದುಕೊಂಡು ಹೋಗುವ ವಿಷಯದಲ್ಲಿ ಇನ್ನೇನು ನಮ್ಮ ಮನೆಗೆ ಹೊಸ ಅತಿಥಿ ಬರುವ ನಿರೀಕ್ಷೆಯಲ್ಲಿದ ಕುಟುಂಬದವರು ಅಪಘಾತ ವಿಷಯ ತಿಳಿದು ಬರ ಸಿಡಿಲು ಬಡಿದಂತಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಆಳಂದ ತಾಲೂಕಿನಲ್ಲಿ ಸ್ಮಶಾನಮೌನ ಆವರಿಸಿದೆ. ಮಕ್ಕಳು ಮತ್ತು ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ವರ್ಗದವರು ಶವಗಳ ಮುಂದೆ ರೋಧಿಸುತಿರುವ ದೃಶ್ಯ ಮನಕಲಕುವಂತಿತ್ತು

Related