ಆಕಸ್ಮಿಕ ಬೆಂಕಿ; ತಂದೆ-ಮಗ ಸಾವು

ಆಕಸ್ಮಿಕ ಬೆಂಕಿ; ತಂದೆ-ಮಗ ಸಾವು

ಮೈಸೂರು, ಫೆ. 14 : ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ತಂದೆ-ಮಗ ದಾರುಣ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಒಲೆ ಹಚ್ಚುವಾಗ ಸೀಮೆ ಎಣ್ಣೆ ಚೆಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಬಳಿಕ ಇಡೀ ಮನೆಗೆ ಬೆಂಕಿ ವ್ಯಾಪಿಸಿ ಅಪ್ಪ-ಮಗ ಸಜೀವ ದಹನ ಆಗಿದ್ದಾರೆ ಎಂದು ತಿಳಿದು ಬಂದಿದೆ. ಮೈಸೂರಿನ ಈಶ್ವರ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ತಂದೆ ರೇಣುಕಾಸ್ವಾಮಿ ಮತ್ತು ಮಗ ತೇಜಸ್ ಮೃತದುರ್ದೈವಿಗಳು. ತಾಯಿ ಪುಷ್ಪಲತಾ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related