ಎಸಿಬಿ ಬಲೆಗೆ ತೋಟಗಾರಿಕೆ ಇಲಾಖೆ ಅಧಿಕಾರಿ

ಎಸಿಬಿ ಬಲೆಗೆ ತೋಟಗಾರಿಕೆ ಇಲಾಖೆ ಅಧಿಕಾರಿ

ಯಾದಗಿರಿ : ಅನ್ನದಾತರು ಸಂಕಷ್ಟದಲ್ಲಿದ್ದಾಗ ರೈತರಿಗೆ ಸರ್ಕಾರ ಒದಗಿಸುವ ಸೌಲಭ್ಯವನ್ನು ಸಮರ್ಪಕವಾಗಿ ವಿತರಿಸುವುದು ಆದರೆ, ಅನ್ನದಾತರಿಗೆ ಆಶ್ರಯವಾಗಬೇಕಾದ ಅಧಿಕಾರಿಯೊಬ್ಬರು ರೈತರಿಂದಲೇ ಹಣ ಪೀಕುವ ಕೆಲಸಕ್ಕೆ ಕೈಹಾಕಿ ಈಗ ಎಸಿಬಿ ಬಲೆಗೆ ಸಿಕ್ಕಿಕೊಂಡಿದ್ದಾನೆ.

ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಅಧಿಕಾರಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು. ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಲೇ ಭ್ರಷ್ಟ ಆರೋಪಿ ಅಧಿಕಾರಿಯು ಎಸಿಬಿ ಎಸ್‌ಪಿ ಮಹೇಶ್ ಮೇಘಣ್ಣನವರ್ ಅವರ ಕಾಲಿಗೆ ಬೀಳಲು ಮುಂದಾದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು ಅವರು ಕೌಳುರು ಗ್ರಾಮದ ರೈತ ಶಿವಾರೆಡ್ಡಿ ಅವರಿಂದ ಹನಿ ನೀರಾವರಿಯ 1.50 ಲಕ್ಷ ರೂ ಯೋಜನೆ ಸೌಲಭ್ಯ ನೀಡಲು ಪ್ರತಿಯಾಗಿ 6 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದರು. ರೈತ ಶಿವಾರೆಡ್ಡಿ ಪರವಾಗಿ ವೀರುಪಾಕ್ಷಿ ಮೂಲಕ ಇಂದು 5 ಸಾವಿರ ಲಂಚದ ಹಣವನ್ನು ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಐದು ಸಾವಿರ ಹಣ ಪಡೆಯುವಾಗ ಅಧಿಕಾರಿ ಮಲ್ಲಿಕಾರ್ಜುನ ಬಾಬು ಸಿಕ್ಕಿಹಾಕಿಕೊಂಡಿದ್ದಾನೆ. ಈತನ ವಿಚಾರಣೆ ನಡೆಸಿ ಎಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

Related