ಆಧಾರ್ ತಿದ್ದುಪಡಿ ಮುಗಿಬಿದ್ದ ಜನ

ಆಧಾರ್ ತಿದ್ದುಪಡಿ ಮುಗಿಬಿದ್ದ ಜನ

ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ನಾಡಕಚೇರಿ ಮುಂಬಾಗ ಸೋಮವಾರ ಬೆಳಗ್ಗಿನಿಂದಲೇ ಜನರು ಮುಗಿಬಿದ್ದಿದ್ದರು. ಪ್ರತಿಯೊಂದು ಕಚೇರಿಗೂ ಹಾಗೂ ಸರ್ಕಾರದ ಇನ್ನಿತರ ಕೆಲಸ ಹಾಗೂ ಖಾಸಗಿ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಈ ಆಧಾರ್ ಕಾರ್ಡ್ ಅಕ್ಷರ ದೋಷ ತಿದ್ದುಪಡಿ ಮತ್ತು ವಿಳಾಸ ಬದಲಾವಣೆ ಜನರು ಬದುಕಿನ ನಿರ್ಧಾರದ ಆಧಾರ್ ಕಾರ್ಡ್ ಪಡೆಯಲು ಇನ್ನಿಲ್ಲದಂತೆ ಅಲೆಯುತ್ತಿದ್ದಾರೆ

ಕೆಲ ಕಡೆಗಳಲ್ಲಿ ಮಾತ್ರವೇ ಆಧಾರ್ ಕಾರ್ಡ್ ತಿದ್ದುಪಡಿ, ನೂತನ ಕಾರ್ಡುಗಳನ್ನು ಮಾಡಲಾಗುತ್ತಿದ್ದು ತುರ್ತಾಗಿ ಆಗುತ್ತಿಲ್ಲ. ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಇನ್ನಿತರ ಕಾರ್ಯಕ್ಕಾಗಿ ಮಧ್ಯರಾತ್ರಿ ನಂತರದ ಸಮಯದಲ್ಲಿಯೇ ಈ ಆಧಾರ್‌ಕಾರ್ಡ್ ಕೇಂದ್ರಕ್ಕೆ ಆಗಮಿಸಿ ಜನ ತಮ್ಮ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಬೆಳಿಗ್ಗೆ ಹತ್ತೂವರೆಗೆ ಆಗಮಿಸುವ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಆಗಮಿಸಿ ಒಂದು ವಾರಕ್ಕೆ ಕೇವಲ ೧೨೦ ಟೋಕನ್ ಗಳನ್ನು ಒಂದು ವಾರದ ಅವಧಿಗಾಗಿ ದಿನಾಂಕ ನಮೂದು ಮಾಡಿ ನೀಡುತ್ತಾರೆ. ಈ ಟೋಕನ್ ಪಡೆಯಲು ಸೋಮವಾರ ರಾತ್ರಿ ಅರ್ಧ ನಿದ್ದೆಯಿಂದ ಎದ್ದು ಬರಬೇಕು. ತಾಳ್ಮೆಯಿಂದ ಇದ್ದು ಆಧಾರ್ ಕೇಂದ್ರದ ಮುಂದೆ ಕಾಯಬೇಕು. ಎಲ್ಲದರಲ್ಲಿಯೂ ಸಫಲಗೊಂಡರೆ ಆಗ ೧ಟೋಕನ್ ಸಿಗುತ್ತದೆ. ಅದರಲ್ಲಿನ ದಿನಾಂಕದAದು ಬಂದು ನಿಮ್ಮ ಆಧಾರ್ ಕಾರ್ಡಿನ ಪ್ರಕ್ರಿಯೆಗಳನ್ನು ಮಾಡಿಸಿ ಕೊಳ್ಳಬೇಕು.

ಈ ವ್ಯವಸ್ಥೆ ಇದ್ದು, ಇಲ್ಲಿ ಮಕ್ಕಳು ಮಹಿಳೆಯರು ವೃದ್ಧರು ಅಂಗವಿಕಲರು ಪಡೆಯಲು ಸಾಧ್ಯವಾಗುತ್ತಿಲ್ಲ ಅಲ್ಲದೆ ಕಾರ್ಡು ತಿದ್ದುಪಡಿ ಮಾಡಿಸಲು ೨ದಿನಗಳ ಕೆಲಸ ಕಾರ್ಯ ಬಿಟ್ಟು ಕೇಂದ್ರಗಳಿಗೆ ಅಲೆಯಬೇಕಾಗಿದೆ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಾದ ಸರ್ಕಾರ ಹೆಚ್ಚಿನ ತೊಂದರೆಗಳನ್ನು ಈ ರೀತಿಯಾಗಿ ಮಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

Related