19ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

19ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ಯುವಕರು ಹೋಟೆಲ್ಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದ್ದು, ಇಂದು ಸುಮಾರು 28 ವಯಸ್ಸಿನ ಯುವಕನೊಬ್ಬನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತಮಿಳುನಾಡು ನಾಡಿನ ಶರಣ್ ಎಂಬಾತನು ಖಾಸಗಿ ಹೋಟೆಲ್ ನಲ್ಲಿ 19 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಶರಣ್ ಎಂಬುವವನು ಈ ಹಿಂದೆಯೂ ಕೂಡ ಇದೇ ಹೋಟೆಲ್ನಲ್ಲಿ ರೂಮ್ ಪಡೆದಿದ್ದು ಮತ್ತೆ ನಿನ್ನೆ ಹೋಟೆಲ್ ಗೆ ಬಂದಿದ್ದುಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೋಟೆಲ್ ಸಿಬ್ಬಂದಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಶವವನ್ನು ಶಿಫ್ಟ್ ಮಾಡಿದ್ದು, ಹೋಟೆಲ್​ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಟ್ಟಡದಿಂದ ಯುವಕ ಬೀಳುತ್ತಿರುವ ದೃಶ್ಯ ನ್ಯೂಸ್​​18ಗೆ ಲಭ್ಯವಾಗಿದೆ.

 

Related