ಒಂದೇ ವಾರ ಬಾಕಿ; ಇನ್ನೂ ಬಿಡುಗಡೆಯಾಗಿಲ್ಲ ಸರ್ಕಾರದ ಮಾರ್ಗಸೂಚಿ

ಒಂದೇ ವಾರ ಬಾಕಿ; ಇನ್ನೂ ಬಿಡುಗಡೆಯಾಗಿಲ್ಲ ಸರ್ಕಾರದ ಮಾರ್ಗಸೂಚಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣಪತಿ ಹಬ್ಬಕ್ಕೆ ಒಂದೇ ವಾರ ಉಳಿದಿದೆ. ಇಷ್ಟು ವರ್ಷ ಗಣಪತಿ ಹಬ್ಬ ಬಂತು ಎಂದರೆ ಒಂದು ತಿಂಗಳ ಮೊದಲೇ ಹಬ್ಬದ ಸಂಭ್ರಮ ಸಡಗರ ಮನೆ ಮಾಡುತ್ತಿತ್ತು.

ಕಾರವಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ, ಈ ಬಾರಿ ಕೊರೋನಾ ಮಹಾಮಾರಿಗೆ ಹಬ್ಬದ ಸಂಭ್ರಮ ಸಡಗರ ಕಳೆ ಕಳೆದುಕೊಂಡಿದೆ.

ಹಬ್ಬದ ಆಚರಣೆ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಯವರು ಗೊಂದಲದಲ್ಲೇ ಇದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಕೇಳಿದರೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವವರು ಆಯಾ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು. ಜತೆಗೆ ಅಗತ್ಯಕ್ಕಿಂತ ಹೆಚ್ಚು ಜನ ಅಲ್ಲಿ ಇರಬಾರದು. ಒಂದೋ ಅಥವಾ ಎರಡೇ ದಿನದಲ್ಲಿ ಹಬ್ಬ ಆಚರಿಸಿ ಮುಗಿಸಬೇಕು ಹೇಳಿದರು.

ಒಟ್ಟಾರೆ ಸಂಭ್ರಮ ಸಡಗರದಿಂದ ಆಚರಿಸುವ ಗಣಪತಿ ಹಬ್ಬಕ್ಕೆ ಕೊರೋನಾ ಮಹಾಮಾರಿ ಅಡ್ಡಗಾಲು ಹಾಕಿದೆ. ಸರಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಮಾಡಲು ಎಲ್ಲರೂ ತಯಾರಿಯಲ್ಲಿ ಇದ್ದಾರೆ. ಆದರೆ, ಮಾರ್ಗಸೂಚಿ ಇನ್ನೂ ಬಾರದಿರುವುದು ಗೊಂದಲಕ್ಕೆ ಕಾರಣವಾಗಿದ್ದು ಹಬ್ಬ ಹೇಗೆ ಆಚರಣೆ ಆಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

Related