ಕೊಟ್ಟೂರು ಆಸ್ಪತ್ರೆಯಲ್ಲಿ ಅವ್ಯವಸ್ಥೆ

ಕೊಟ್ಟೂರು ಆಸ್ಪತ್ರೆಯಲ್ಲಿ ಅವ್ಯವಸ್ಥೆ

ಕೊಟ್ಟೂರು: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅಡ್ಮಿಟ್ ಆದವರನ್ನು ಸರಿಯಾಗಿ ಶುಶ್ರೂಷೆ ಮಾಡಲು ಯಾವುದೇ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಈ ಕೂಡಲೇ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೊಟ್ಟೂರಿನ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವರ್ಗದ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ತವ್ಯದಿಂದ ನಿವೃತ್ತಿ ಹೊಂದಿರುವ ಡಾ.ಸುಲೋಚನ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಜನರಿಗೆ ಮನಬಂದಂತೆ ಮಾತನಾಡಿ, ರೋಗಿಗಳನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ಡಾ.ಸುಲೋಚನ ಅವರು ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತೇನೆಂದು ಜನರಿಗೆ ಆಕ್ರೋಶದಿಂದ ಮಾತನಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಇರುವುದಿಲ್ಲ. ಮಾದ್ಯಮದವರು ಬಂದ ಕೂಡಲೇ ಆಸ್ಪತ್ರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಈ ಕೂಡಲೇ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಕರ್ತರು ಈ ಬಗ್ಗೆ ಡಾ.ಬದ್ಯಾನಾಯ್ಕರನ್ನು ಮಾತನಾಡಿಸಿದಾಗ ಡಾ.ಸುಲೋಚನಾ ಅವರ ವರ್ತನೆಯ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ದೂರವಾಣಿ ಕರೆ ಮಾಡಿದಾಗ ನನಗೆ ಸಕ್ಕರೆ ಕಾಯಿಲೆ ಇದೆ ಎಂದರು. ಅನಾರೋಗ್ಯವಾಗಿದ್ದರೆ ಬರುವ ರೋಗಿಗಳಿಗೆ ಹೇಗೆ ಸೇವೆ ಸಲ್ಲಿಸುತ್ತಾರೆ. ತಮ್ಮ ಮನೆಯಲ್ಲಿ ಆರಾಮಾಗಿ ಇರಲಿ ಅವರ ಉಚಿತ ಸೇವೆ ಬೇಡ ಎಂದು ಸರ್ವಜನಿಕರು ಒತ್ತಾಯಿಸಿದರು. ಮುಂಬರುವ ದಿನಗಳಲ್ಲಿ ಈ ರೀತಿ ತೊಂದರೆಯಾಗದಂತೆ ನೋಡಿಕೊಳ್ಳತ್ತೇವೆ ಎಂದು ಭರವಸೆ ನೀಡಿದರು.

ರಾತ್ರಿ ಸಮಯದಲ್ಲೇನಾದರೂ ರೋಗಿಗಳು ಬಂದರೆ ಅವರನ್ನು ಶುಶ್ರೂಷೆ ಮಾಡಲು ವ್ಯವಸ್ಥೆಗಳು ಇದ್ದರೂ ಸಹ ಸಣ್ಣ ಪುಟ್ಟ ಶುಶ್ರೂಷೆಗಳನ್ನು ಮಾಡದೇ ಜಿಲ್ಲಾ ಆಸ್ಪತ್ರೆಗಳಿಗೆ ಹೋಗಿ ಎನ್ನುತ್ತಾರೆ. ಬಡವರ ಸಂಕಟ ಯಾರಿಗೆ ಹೇಳಬೇಕು. ಆಸ್ಪತ್ರೆಯಲ್ಲಿ ಲಭ್ಯವಿದ್ದ ಔಷಧಿಗಳನ್ನೂ ಸಹ ನೀಡುವುದಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದಾರೆ.

Related