ಆರೋಗ್ಯಕಾರಿ ತರಕಾರಿ ಬೀಟ್ರೂಟ್!

ಆರೋಗ್ಯಕಾರಿ ತರಕಾರಿ ಬೀಟ್ರೂಟ್!

ಸಾಮಾನ್ಯವಾಗಿ ರುತುಮಾನ ಬದಲಾದಂತೆ ನಮ್ಮ ಆರೋಗ್ಯದಲ್ಲಿ ಏರುಪೇರು ಕಂಡು ಬರದು ಸರ್ವೇಸಾಮಾನ್ಯ. ನಮ್ಮ ಆರೋಗ್ಯವನ್ನು ಎಲ್ಲಾ ಕಾಲಕ್ಕೂ ಸಮತೋಲನವಾಗಿ ಕಾಪಾಡಿಕೊಳ್ಳಲು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳಬಹುದು.

ಹೌದು ಚಳಿಗಾಲ ಬಂತೆಂದರೆ ಸಾಕು ಸಾಮಾನ್ಯವಾಗಿ ಎಲ್ಲರ ಆರೋಗ್ಯದಲ್ಲಿ ಏರುಪೇರು ಆಗುವುದುಂಟು. ಈ ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ನಾವು ಬೀಟ್ರೂಟ್ ಸೇವನೆಯಿಂದ ಕಾಪಾಡಿಕೊಳ್ಳಬಹುದು.

ಸಾಮಾನ್ಯವಾಗಿ ತರಕಾರಿಗಳಿಗೆ ಬೀಟ್ರೂಟ್ ಬಾಸ್ ಇದ್ದಂತೆ ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಈ ತರಕಾರಿಯಲ್ಲಿ ಸಿಗುತ್ತದೆ. ಆದ್ದರಿಂದ ನಾವು ಈ  ಚಲಿಗಾಲದಲ್ಲಿ ಬೀಟ್ರೂಟ್ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜಗಳಿವೆ.

ಪ್ರಮುಖವಾಗಿ ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು, ನೈಟ್ರೇಟ್ ಅಂಶಗಳು, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟ್ಯಾಶಿಯಮ್, ಕಬ್ಬಿಣಾಂಶ, ಕ್ಯಾಲ್ಸಿಯಂ,ತಾಮ್ರ ಹಾಗೂ ಇತರ ಖನಿಜಾಂಶಗಳು ಈ ತರಕಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದೊಂದು ಆರೋಗ್ಯಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೀಟ್ರೂಟ್ ಜ್ಯೂಸ್ ಸೇವನೆಯಿಂದ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡಿ ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ನೆರವಿಗೆ ಬರುತ್ತದೆ.

ಚರ್ಮದ ಸೌದರ್ಯಕ್ಕೆ ರಾಮಬಾಣವಿದ್ದಂತೆ. ರಕ್ತದೊತ್ತಡವನ್ನು ನಿಯಮತ್ರಿಸಲು ಸಹಕಾರಿ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕ. ರಕ್ತಹೀನತೆ ಸಮಸ್ಯೆಯಿಂದ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ. ರಕ್ತ ಸಂಚಾರ ಸುಗಮವಾಗಿ ಕಾರ್ಯನಿರ್ವಹಿಸುಲು ಸಹಾಯಕವಾಗುತ್ತದೆ. ನಾವು ನಿತ್ಯ ಒಂದು ಲೋಟ ಬೀಟ್ರೂಟ್ ಜ್ಯೂಸ್​ ಕುಡಿಯುವುದರಿಂದ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ.

Related