ತಮಿಳಿನಲ್ಲೂ ಮಿಂಚಲಿರುವ ಹ್ಯಾಟ್ರಿಕ್ ಹೀರೋ

ತಮಿಳಿನಲ್ಲೂ ಮಿಂಚಲಿರುವ ಹ್ಯಾಟ್ರಿಕ್ ಹೀರೋ

ಬೆಂಗಳೂರು: ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವಣ್ಣ ಇತ್ತೀಚಿಗೆ ತೆಲಗು ಸಿನಿಮಾದಲ್ಲಿ ರಜನಿಕಾಂತ್ ಜೊತೆ ಅತಿಥಿ ಪತ್ರದಲ್ಲಿ ನಟನೆ ಮಾಡಿ, ತೆಲುಗು ಚಿತ್ರರಂಗದಲ್ಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮತ್ತೆ ಇದೀಗ ತಮಿಳಿನಲ್ಲೂ ಕೂಡ ನಟನೆ ಮಾಡಲು ಸೆಂಚುರಿ ಸ್ಟಾರ್ ಶಿವಣ್ಣ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಕನ್ನಡದ ಚಕ್ರವರ್ತಿ ನಟ ಡಾ. ಶಿವರಾಜಕುಮಾರ್ ಅವರು ಕನ್ನಡ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟನೆ ಮಾಡಲು ಒಲವು ತೋರಿದ್ದಾರೆ.

ಯೆಸ್.. ತಮಿಳು ಸ್ಟಾರ್ ಧನುಷ್ ಜೊತೆ‌ ಇದೀಗ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆ ಸಮಾರಂಭ ಚೆನ್ನೈನಲ್ಲಿ ನಡೆದಿದೆ. ಈ ಸಮಾರಂಭದಲ್ಲಿ ಶಿವರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ ಧನುಷ್. ತಂದೆಯ ಹೆಸರು ಉಳಿಸಲು ನಿಮ್ಮನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದಿದ್ದಾರೆ.

ಧನುಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡ್ತಿದೆ.

 

Related