ಗಿನ್ನಿಸ್ ದಾಖಲೆ ಕಲಾವಿದನಿಗೆ ಸನ್ಮಾನ

ಗಿನ್ನಿಸ್ ದಾಖಲೆ ಕಲಾವಿದನಿಗೆ ಸನ್ಮಾನ

ಗಂಗಾವತಿ:ನಗರದಲ್ಲಿ ಆಗಸ್ಟ್ ೧೫ರ ಪ್ರಯುಕ್ತ ಕಲ್ಯಾಣ ಕರ್ನಾಟಕ ಭಾಗದ ಹುನಗುಂದ ತಾಲೂಕಿನ ಯುವ ಉತ್ಸಾಹಿ ಕಲಾವಿದ ವಿಜಯ ಬೋಳಶೆಟ್ಟಿ ಅವರು ಕೇವಲ ಪೈಂಟಿಂಗ್ ಬ್ರಷ್‌ನ ಎಳೆಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರಗಳನ್ನು ರಚಿಸಿ ಗಿನ್ನಿಸ್ ದಾಖಲೆ ಪುಸ್ತಕ  ಸೇರಿದ್ದಾರೆ.
೭೪ನೇ ವರ್ಷದ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಇವರನ್ನು ನಗರದ ಶ್ರೀ ಚನ್ನಬಸ ತಾತನ ಮಠಕ್ಕೆ ಅಹ್ವಾನಿಸಿದ್ದರು ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ   ನಾಮನಿರ್ದೇಶಕ ಸದಸ್ಯರು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಿಗಮ ಮಂಡಳಿಯ ಮಹಿಳಾ, ಶಿಕ್ಷಣ, ಯುವ ಜನತೆಯ ಅಧ್ಯಕ್ಷರಾಗಿರುವ ಲೀಲಾ ಮಲ್ಲಿಕಾರ್ಜುನ ಕಾರಟಗಿ ಅವರಿಗೆ ಬಿಎಸ್ ವೈ ಅಭಿಮಾನಿಗಳ ಬಳಗ ನೇತೃತ್ವದಲ್ಲಿ ಕಲಾವಿದ ವಿಜಯನನ್ನು ಸನ್ಮಾನಿಸಿ ಗೌರವಿಸಿದರು.
ಪ್ರತಿಯೊಬ್ಬ ಮನುಷ್ಯನಲ್ಲಿ ತನ್ನದೇ ಆದ ವಿಶಿಷ್ಟವಾದ ವಿವಿಧ ಕ್ಷೇತ್ರದಲ್ಲಿ. ಕಲೆಯನ್ನು ಹೊಂದಿರುತ್ತಾನೆ. ಚಿತ್ರಕಲೆ ಸ್ಪರ್ಧೆ ಎಲ್ಲರಿಗೂ ಬರುವುದಿಲ್ಲ. ಅದು ದೇವರು ಕೊಟ್ಟ ಕೊಡುಗೆ. ಕೇವಲ ಬ್ರಷ್‌ನ ಒಂದು ಎಳೆಯಿಂದ ಅಂಗಿಯ ಬಟನ್‌ನಷ್ಟು ಜಾಗದಲ್ಲಿ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರಗಳನ್ನು ಅದ್ಭುತವಾಗಿ ಚಿತ್ರಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ವಿಷಯ. ಇಂತಹ ಕಲಾವಿದನ ಕೈಚಳಕದ ಚಿತ್ರಗಳು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿರುವುದು ತುಂಬಾ ಖುಷಿ ತಂದಿದೆ ಎಂದು ಬಿಎಸ್ ವೈ ಟೀಮ್ ಸಂತಸ ವ್ಯಕ್ತಪಡಿಸಿದೆ.

Related