ತಂದೆಗೆ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಬಾಲಕಿ

ತಂದೆಗೆ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಬಾಲಕಿ

ಭೋಪಾಲ್ : ಹದಿನಾರು ವರ್ಷದ ಮಗಳು ತಂದೆಯನ್ನು ಕೊಲೆ ಮಾಡಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

ತನ್ನ ತಾಯಿಯ ಮೇಲೆ ತಂದೆ ನಡೆಸುತ್ತಿರುವ ಹಲ್ಲೆಯನ್ನು ಸಹಿಸಲಾಗದೆ ಮಗಳು ತಂದೆಗೆ ಹೊಡೆದು ಹತ್ಯೆ ಮಾಡಿದ್ದು, ಬಳಿಕ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ.

ನಿತ್ಯ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ, ತುಂಬಾ ವರ್ಷಗಳಿಂದ ಇದನ್ನು ನೋಡಿ ನೋಡಿ ಸಾಕಾಗಿತ್ತು ಹಾಗಾಗಿ ಕೊಲೆ ಮಾಡಿರುವುದಾಗಿ ಬಾಲಕಿ ತಿಳಿಸಿದ್ದಾಳೆ.

ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟ್‌ನಿಂದ ತಂದೆಯ ಮೈಯಿಂದ ರಕ್ತ ಬಸೆಯುವವರೆಗೂ ಹೊಡೆದಿದ್ದಾಳೆ. ಇನ್ನು ಆತ ಸತ್ತನೆಂದು ತಿಳಿಯುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾಳೆ. ಆಕೆಯ ಮೇಲೆ ಪ್ರಕರಣ ದಾಖಲಾಗಿದೆ.

Related