ಕುಸಿದು ಬಿದ್ದ ಶಾಲಾ ಛಾವಣಿ

ಕುಸಿದು ಬಿದ್ದ ಶಾಲಾ ಛಾವಣಿ

ಮುದ್ದೇಬಿಹಾಳ : ಶಾಲಾ ಛಾವಣಿ ಕುಸಿದು ಬಿದ್ದಿರುವ ಘಟನೆ  ತಾಲೂಕಿನ ಇಣಚಗಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ ಘಟನೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

ಕಳೆದ ಹಲವಾರು ವರ್ಷಗಳಿಂದ ಗ್ರಾಮದ ಪ್ರಮುಖ ಸ್ಥಳದಲ್ಲಿದ್ದ ಶಾಲೆಯ ಒಂದು ಕೊಠಡಿಯ ಛಾವಣಿ ಶಿಥಿಲಗೊಂಡಿತ್ತು. ಹಲವಾರು ಬಾರಿ ಗ್ರಾಮಸ್ಥರು ಅದನ್ನು ನೆಲಸಮಗೊಳಿಸುವಂತೆ ಸಂಬಂಧಪಟ್ಟ ಶಿಕ್ಷಕರಿಗೆ, ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಅದನ್ನು ನೆಲಸಮಗೊಳಿಸಿರಲಿಲ್ಲ.

ಸೋಮವಾರ ಬೆಳಗ್ಗೆ ಹೆಂಚಿನಿಂದ ಕೂಡಿದ್ದ ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದಂತಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಮಾಜಿ ಸದಸ್ಯ ಸಾಯಬಣ್ಣ ತಳವಾರ, ಯುವ ಮುಖಂಡ ನಾಗರಾಜ ಕನ್ನೊಳ್ಳಿ, ಹಲವಾರು ಬಾರಿ ಶಿಥಿಲ ಕೊಠಡಿಯನ್ನು ನೆಲಸಮ ಮಾಡಿ ಎಂದು ಹೇಳಿದ್ದರೂ ಅದಕ್ಕೆ ಬೆಲೆ ಕೊಟ್ಟಿರಲಿಲ್ಲ ಎಂದು ದೂರಿದರು.

Related