ಅಂಧ ವಿದ್ಯಾರ್ಥಿನಿ ಬಾಳಿಗೆ ಬೆಳಕಾದ: ಡಿಸಿಎಂ

ಅಂಧ ವಿದ್ಯಾರ್ಥಿನಿ ಬಾಳಿಗೆ ಬೆಳಕಾದ: ಡಿಸಿಎಂ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಯಲಹಂಕದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಅಂದ ಬಿಎ ಪದವಿ ಮುಗಿಸಿದ ಯುವತಿಗೆ ಸ್ಥಳದಲ್ಲಿ ಕೆಲಸ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಂದ ಪದವಿ ವಿದ್ಯಾರ್ಥಿನಿ ದಿವ್ಯಂಜಲಿ ಕೆಲಸ ಕೊಡಿಸಿದ್ದಾರೆ. ಸುಂಕದಕಟ್ಟೆ ಶಾಂತಿಧಾಮ ಸಂಸ್ಥೆಯ ಅಂಧ ವಿದ್ಯಾರ್ಥಿನಿ ಯಾಗಿರುವ ದಿವ್ಯಾಂಜಲಿ ಎಂಬುವವರಿಗೆ ಸ್ವಾವಲಂಭಿ ಜೀವನ ನಡೆಸುವ ಉದ್ದೇಶದಿಂದ ಕೆಲಸವೊಂದನ್ನು ಕೊಡಿಸುವ ಮೂಲಕ ಅಂಧ ವಿದ್ಯಾರ್ಥಿನಿ ಬಾಳಿಗೆ ಬೆಳಕಾಗಿದ್ದಾರೆ.

ಯಲಹಂಕದ ಅಂಬೇಡ್ಕರ್ ಭವನದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ದಿವ್ಯಾಂಜಲಿ ಅವರು, ‘ನನಗೆ ಕಣ್ಣು ಕಾಣಲ್ಲ, ಹಾಗಾಗಿ ಎಲ್ಲೂ ಕೆಲಸ ಸಿಗುತ್ತಿಲ್ಲ. ಹೀಗಾಗಿ ಕೆಲಸ ಕೊಡಿಸುವಂತೆ ಡಿಕೆ ಶಿವಕುಮಾರ್​ ಅವರಿಗೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಮನವಿಗೆ ಸ್ಪಂಧಿಸಿದ ಡಿಸಿಎಂ, ಸ್ಥಳದಲ್ಲಿಯೇ ದಿವ್ಯಾಂಜಲಿಗೆ BBMP ಕೆಲಸ ಕೊಡಿಸಿದ್ದಾರೆ. ಹೌದು, ದಿವ್ಯಾಂಜಲಿ ಅವರ ಪದವಿ ಸರ್ಟಿಫಿಕೇಟ್ ಪರಿಶೀಲಿಸಿ, ಬಿಬಿಎಂಪಿ ಅಧಿಕಾರಿಗಳಿಗೆ ಕೆಲಸಕೊಡುವಂತೆ ತಾಕೀತು ಮಾಡಿದ್ದಲ್ಲದೆ, ಕಾಲ್ ಸೆಂಟರ್ ಅಥವಾ ಕೂತು ಮಾಡುವ ಕೆಲಸವನ್ನೇ ಕೊಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 

Related