ಖಾಕಿಯಿಂದ ಲಾಠಿ ರುಚಿ

  • In State
  • July 12, 2020
  • 397 Views
ಖಾಕಿಯಿಂದ ಲಾಠಿ ರುಚಿ

ಕಲಬುರಗಿ:  ಸೂರ್ಯನಗರಿ ಕಲಬುರಗಿಯಲ್ಲಿ ಖಾಕಿ ಪಡೆ ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕಾಗಿ  ಸರ್ಕಾರ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದರಿಂದ ಸೂರ್ಯ ನಗರಿ ಕಲಬುರಗಿಯ ಪೊಲೀಸರು ನಗರದೆಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

ನಗರದಾದ್ಯಂತ ಬೆಳ್ಳಂಬೆಳಗ್ಗೆ ಖಾಕಿ‌ ಪಡೆ ರಸ್ತೆಗಳೆಲ್ಲ ರೌಂಡ್ಸ್ ಹಾಕುವ ಮೂಲಕ ಸಾರ್ವಜನಿಕರು ಹೊರಗೆ ಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ನಗರದ ಸರ್ದಾರ್ ವಲ್ಲಭ ಬಾಯ್ ಪಟೇಲ್ ವೃತ್ತದಲ್ಲಿ ಸುಖಾ ಸುಮ್ಮನೆ ರಸ್ತೆಗಳಿದಿದ್ದವರನ್ನು ಪೊಲೀಸರು ಲಾಠಿ ರುಚಿ ಮುಟ್ಟಿಸಿದ್ದಾರೆ.

 

Related