ನವದೆಹಲಿ: ಜಾಗತಿಕ ಮಟ್ಟದಲ್ಲಿ ಜನರ ನಿದ್ದೆಗೆಡಿಸಿರುವ ಕೊರೊನಾ ಭಾರತವನ್ನು ಕೂಡ ಆತಂಕಕ್ಕೆ ತಳ್ಳಿದೆ. ಕಳೆದ 24 ಗಂಟೆಗಳಲ್ಲಿ 47 ಮಂದಿ ಸಾವನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಇಂದಿನ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,800 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. 47 ಸಾವು ಸಂಭವಿಸಿದ್ದು, ಇದೀಗ ಕೊರೋನಾ ಸೋಂಕಿತರ ಸಂಖ್ಯೆ 18 ಸಾವಿರದ 601ಕ್ಕೇರಿದೆ. 3 ಸಾವಿರದ 252 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 590 ಮಂದಿ ಮೃತಪಟ್ಟಿದ್ದಾರೆ.
ಲಾಕ್ ಡೌನ್ ಮೊದಲು ದಿನಕ್ಕೆ ಶೇಕಡಾ 7.5ರಷ್ಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ಲಾಕ್ ಡೌನ್ ನಂತರ ಶೇಕಡಾ 3.4ಕ್ಕೆ ಇಳಿದಿದೆ ಎಂದು ಹೇಳಿದೆ.