ಇನಾಂಯಲ್ಲಾಪೂರದಲ್ಲಿ ಎಲ್ಲರಿಗೂ ಲಸಿಕೆ ಆಗಿದೆ

  • In State
  • August 27, 2021
  • 550 Views
ಇನಾಂಯಲ್ಲಾಪೂರದಲ್ಲಿ ಎಲ್ಲರಿಗೂ ಲಸಿಕೆ ಆಗಿದೆ

ಹಾನಗಲ್ಲ : ಇನಾಂಯಲ್ಲಾಪೂರ ಗ್ರಾಮದ ಎಲ್ಲಾ ಜನರು ಲಸಿಕೆ ಪಡೆದಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಕೆ.ಜಿ.ಲಿಂಗರಾಜ್‌ ಬುಧವಾರ ತಿಳಿಸಿದರು. ಶೇ.100 ರಷ್ಟು ಲಸಿಕೆ ಪಡೆದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮದಲ್ಲಿ ಒಟ್ಟು 653 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ತಾಲೂಕಿನ ಎಲ್ಲ ಗ್ರಾಮಗಳು ಸಂಪೂರ್ಣವಾಗಿ ಲಸಿಕೆ ಪಡೆದ ಗ್ರಾಮಗಳಾಗಬೇಕು ಎಂಬುದು ಸರಕಾರದ ಆಶಯವಾಗಿದೆ. ಪ್ರತಿಯೊಬ್ಬರು ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಿದಾಗ ಮಾತ್ರ ಕೋವಿಡ್‌ನಿಂದ ದೂರವಿರಲು ಸಾಧ್ಯ ಎಂದು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಿದರು. ಎಲ್ಲಾ ವೈದ್ಯಾಧಿಕಾರಿ, ಆರೋಗ್ಯ ಸಿಬ್ಬಂದಿಯವರಿಗೆ ಕೃತಜ್ಞತೆ ಸಲ್ಲಿಸಿದರು.

Related