ನಮ್ಮ ಮೆಟ್ರೋದ 91% ‘ಸುರಂಗ ಮಾರ್ಗ’ ಪೂರ್ಣಗೊಂಡಿದೆ: ಡಿಸಿಎಂ

ನಮ್ಮ ಮೆಟ್ರೋದ 91% ‘ಸುರಂಗ ಮಾರ್ಗ’ ಪೂರ್ಣಗೊಂಡಿದೆ: ಡಿಸಿಎಂ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ಮೆಟ್ರೋ ಸಂಚಾರ ಪ್ರಾರಂಭವಾಗಿದ್ದು, ಇನ್ನಷ್ಟು ಬೆಂಗಳೂರು ನಗರ ಜನತೆಗೆ ಮೆಟ್ರೋ ಸಂಚಾರದ ಅವಶ್ಯಕತೆ ಇರುವುದರಿಂದ ನಮ್ಮ ಮೆಟ್ರೋದ ಸುರಂಗ ಮಾರ್ಗದಲ್ಲಿ ಈಗಾಗಲೇ 91% ಕಾಮಗಾರಿ ಸಂಪೂರ್ಣಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇನ್ನು ಈಗಾಗಲೇ ಸುರಂಗ ಮಾರ್ಗ ಎಲ್ಲಾ ಕಡೆಯಿಂದ ಕಾಮಗಾರಿಗಳು ಮುಗಿಯುತ್ತಾ ಬಂದಿದ್ದು ನಿನ್ನೆ ಗುರುವಾರ ಸಂಜೆ 6.08ಕ್ಕೆ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಭದ್ರಾ ಹೊರಹೊಮ್ಮುತ್ತಿದ್ದಂತೆ ಕೆ.ಜಿ.ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಚಪ್ಪಾಳೆ ಮೊಳಗಿತು.

ಜರ್ಮನ್ ನಿರ್ಮಿತ Herrenknecht EPB ಯಂತ್ರ (S-840B) ವೆಂಕಟೇಶಪುರದಿಂದ ಕೆ.ಜಿ.ಹಳ್ಳಿಗೆ 1,186-ಮೀಟರ್, ಉತ್ತರದ ಕಡೆಗೆ ಸುರಂಗವನ್ನು 357 ದಿನಗಳಲ್ಲಿ ಅಥವಾ ದಿನಕ್ಕೆ ಸರಾಸರಿ 3.3 ಮೀಟರ್‌ಗಳಲ್ಲಿ ಕೊರೆಯಿತು. ಇದು ಭದ್ರಾದಿಂದ ಕೊರೆಯಲಾದ ಎರಡನೇ ಸುರಂಗ ಮತ್ತು ಪಿಂಕ್ ಲೈನ್‌ನಲ್ಲಿ ಒಟ್ಟು 24 ರಲ್ಲಿ 22 ನೇ ಸುರಂಗವಾಗಿದೆ.

 

Related