80ಕೋಟಿ ರೂ. ತಿಮಿಂಗಲ ವಾಂತಿ ವಶ

80ಕೋಟಿ ರೂ. ತಿಮಿಂಗಲ ವಾಂತಿ ವಶ

ಬೆಂಗಳೂರು : ಅಂಬರ್ಗ್ರೀಸ್ ಗಟ್ಟಿ, ಪ್ರಾಚೀನ ವಸ್ತುಗಳನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಐದು ಮಂದಿಯನ್ನು ಸಿಸಿಬಿ ಪೊಲೀಸರು ಆರ್‍ಕೆಎಂ ಎಂಟರ್ ಪ್ರೈಸಸ್‍ನಲ್ಲಿ ಮಂಗಳವಾರ ಬಂಧಿಸಿದ್ದಾರೆ.

80 ಕೋಟಿಗೂ ಹೆಚ್ಚು ಬೆಲೆಬಾಳುವ 80 ಕೆಜಿ ಅಂಬರ್ಗ್ರೀಸ್ ಗಟ್ಟಿ, ರೆಡ್ ಮಕ್ರ್ಯೂರಿಯ ತಾಮ್ರದ ಬಾಟಲ್ಗಳು, ಸ್ಟೀಮ್ ಫ್ಯಾನ್ ವಶಪಡಿಸಿಕೊಂಡಿದ್ದಾರೆ. ಮಜೀಬ್ ಪಾಷ, ಮಹಮ್ಮದ್ ಮುನ್ನಾ, ಗುಲಾಬ್ ಚಂದ್, ಸಂತೋಷ್, ಜಗನ್ನಾಥಾಚಾರ್ ಬಂಧಿತ ಆರೋಪಿಗಳು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಒಂದು ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯವಾಗಿದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ತಿಳಿದು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related