ಶೇ 77.65 ರಷ್ಟು ಮತದಾನ

ಶೇ 77.65 ರಷ್ಟು ಮತದಾನ

ಜೇವರ್ಗಿ  : ತಾಲೂಕಿನಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾ.ಪಂ ಚುನಾವಣೆಯಲ್ಲಿ ಶೇ. 77.65ರಷ್ಟು ಮತದಾನವಾಗಿದೆ ಎಂದು ತಾಲೂಕು ದಂಡಾಧಿಕಾರಿ ಸಿದ್ಧರಾಯ ಭೋಸಗಿ ಅವರು ನುಡಿದರು.

ತಾಲೂಕಿನಲ್ಲಿ ಒಟ್ಟು 23 ಗ್ರಾಮ ಪಂಚಾಯತಿಗಳಲ್ಲಿ 333 ಸದಸ್ಯ ಸ್ಥಾನಗಳಿಗೆ, ಪ್ರತಿಯೊಂದು ಹಳ್ಳಿಯ ಮತಗಟ್ಟೆಗಳಲ್ಲಿ, ಬೆಳಿಗ್ಗೆ 7ಗಂಟೆಯಿAದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಹಳ್ಳಿಗಳಲ್ಲಿ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುವ ಕಾರಣ ಚುರುಕಿನಿಂದ ನಡೆದ ಮತದಾನ, ಮಧ್ಯಾಹ್ನ ಮಂದಗತಿಯಲ್ಲಿ ಸಾಗಿತ್ತು. ಮತ್ತೆ 3ಗಂಟೆಯ ನಂತರ ಮತದಾನ ಮತ್ತಷ್ಟು ವೇಗ ಪಡೆದುಕೊಂಡಿತು.

ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದದ್ದು ಕಂಡುಬಂದಿತು . ಮತದಾನದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ರಮೇಶ ರೊಟ್ಟಿ, ಪಿಎಸ್‌ಐ ಮಂಜುನಾಥ ಹೂಗಾರ, ಸಂಗಮೇಶ ಅಂಗಡಿರವರ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಯಿತು.

Related