75 ವಿಮಾನಗಳ ಹಾರಾಟ

75 ವಿಮಾನಗಳ ಹಾರಾಟ

ಬೆಂಗಳೂರು:  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಕ  75 ವಿಮಾನಗಳು ಸಂಚಾರ ನಡೆಸಿದವು.

ಇಂಡಿಗೊ, ಏರ್‌ ಇಂಡಿಯಾ ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳ ವಿಮಾನಗಳು ಕಾರ್ಯಾಚರಣೆ ನಡೆಸಿದವು. ನಗರದಿಂದ 35 ವಿಮಾನಗಳು ಬೇರೆ ರಾಜ್ಯಗಳಿಗೆ ತೆರಳಿದವು. ಬೇರೆ ರಾಜ್ಯ ಮತ್ತು ನಗರಗಳಿಂದ 40 ವಿಮಾನಗಳು ಕೆಐಎಗೆ ಬಂದಿಳಿದವು. ಇವುಗಳಲ್ಲಿ ಸುಮಾರು 700ಕ್ಕೂ ಹೆಚ್ಚು ಪ್ರಯಾಣಿಕರು ಬಂದಿಳಿದಿದ್ದು, ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Related