ಬಡ ನೇಕಾರರ ಖಾತೆಗೆ ರೂ. 2 ಸಾವಿರ – ಬಿ.ಎಸ್. ಯಡಿಯೂರಪ್ಪ

ಬಡ ನೇಕಾರರ ಖಾತೆಗೆ ರೂ. 2 ಸಾವಿರ – ಬಿ.ಎಸ್. ಯಡಿಯೂರಪ್ಪ

ರಬಕವಿ-ಬನಹಟ್ಟಿ : ನೇಕಾರ ಸಮ್ಮಾನ ಯೋಜನೆಯಡಿ ಪ್ರತಿ ಬಡ ನೇಕಾರರ ಖಾತೆಗೆ ರೂ. 2 ಸಾವಿರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಶೀಘ್ರವಾಗಿ ಆದೇಶ ಹೊರಡಿಸುವರು ಎಂದು ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.

ಕೆಎಚ್‍ಡಿಸಿ ಕೈಮಗ್ಗ ನೇಕಾರರು ಮತ್ತು ಬಡ ಪಾವರ್‍ಲೂಮ್ ನೇಕಾರಿಗೆ ಸರ್ಕಾರ ರೂ. 2 ಸಾವಿರ ನೀಡಲಿದೆ. ಅಂದಾಜು ಆರು ಮಗ್ಗಗಳನ್ನು ಹೊಂದಿದ ನೇಕಾರ ಮತ್ತು ಕೂಲಿ ನೇಕಾರರಿಗೆ ಈ ಯೋಜನೆ ಅನ್ವಯಿಸಲಿದ್ದು, ಸರ್ಕಾರದ ವಿವಿಧ ಇಲಾಖೆಗಳಿಗೆ ಬೇಕಾದ ಬಟ್ಟೆ ಮತ್ತು ಸೀರೆಗಳನ್ನು ನೇಕಾರರಿಂದಲೇ ಉತ್ಪಾದಿಸಿ ನೇರವಾಗಿ ಖರೀದಿಸುವಂತೆ ತೀರ್ಮಾನಿಸಲಾಗಿದೆ.

ಸಾಲಮನ್ನಾ ಯೋಜನೆಯ ಅವಧಿಯನ್ನು ಮಾರ್ಚ್ 31, 2019ರಿಂದ ಜೂನ್ 31, 2019ರವರೆಗೆ ವಿಸ್ತರಣೆ ಮಾಡಿ ಸಾಲ ಮತ್ತು ಬಡ್ಡಿ ಮನ್ನಾ ಯೋಜನೆಗೆ ಹೊಸ ಮಾರ್ಗ ಸೂಚಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.

Related